varthabharthi

ನಿಮ್ಮ ಅಂಕಣ

ರಾಜಕಾರಣಿಗಳ ನಾಲಗೆಗೆ ನಿಯಂತ್ರಣವಿರಲಿ

ವಾರ್ತಾ ಭಾರತಿ : 13 Nov, 2017
- ರಿಯಾಝ್ ಅಹ್ಮದ್, ರೋಣ

ಮಾನ್ಯರೆ,
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕೆಲವು ರಾಜಕೀಯ ಮುಖಂಡರು ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಇದು ನಿಜಕ್ಕೂ ಆತಂಕಕಾರಿ ವಿಷಯ. ಅದರಲ್ಲೂ ವಿರೋಧ ಪಕ್ಷದ ಮುಖಂಡರ ಬಾಯಿಯಿಂದ ಇಂತಹ ಮಾತುಗಳು ಆಗಾಗ ಹೊರಬರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಕೋಮು ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಯ ಮೂಲಕ ಮತವನ್ನು ಗಳಿಸಬಹುದು ಎಂಬ ಕೆಟ್ಟ ಮನೋಭಾವದಿಂದ ಇವರು ಹೊರಬರಬೇಕಾಗಿದೆ.
ಚುನಾವಣೆಯ ಈ ಸಮಯದಲ್ಲಿ ಬಿಜೆಪಿ ನಾಯಕರು ತಮ್ಮ ನಾಲಗೆಯ ಮೇಲೆ ನಿಯಂತ್ರಣ ಹಾಕಿಕೊಳ್ಳುವುದು ಒಳ್ಳೆಯದು. ಉತ್ತರ ಪ್ರದೇಶದ ಭಾಷೆಯಲ್ಲಿ ಮಾತನಾಡಿದರೆ ಕರ್ನಾಟಕದಲ್ಲಿ ಗೆಲುವು ಬಹಳ ಕಷ್ಟ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ನಾಡಿನ ಜನರು ಸಜ್ಜನಿಕೆಯ ಗಡಿ ದಾಟಿ ಮಾತನಾಡುವುದನ್ನು ಇಷ್ಟಪಡುವುದಿಲ್ಲ ಎಂಬ ಕನಿಷ್ಠ ಅರಿವು ನಮ್ಮ ರಾಜಕಾರಣಿಗಳಿಗೆ ಇರಬೇಕಾಗಿದೆ.

 

Comments (Click here to Expand)