varthabharthi

ಕ್ರೀಡೆ

ಯುವ ಬಾಕ್ಸರ್ ಗೆ ಪಾಸ್ ಪೋರ್ಟ್ ಭರವಸೆ ನೀಡಿದ ಸಚಿವೆ ಸುಷ್ಮಾ ಬದಲಿಗೆ ಕೇಳಿದ್ದೇನು?

ವಾರ್ತಾ ಭಾರತಿ : 13 Nov, 2017

ಹೊಸದಿಲ್ಲಿ, ನ.13: ಉತ್ತರ ಪ್ರದೇಶದ ಮುಝಾಫರ್ ನಗರದ ನಿವಾಸಿ ಝಾಲಾಕ್ ತೋಮರ್ ಅವರು ಇತ್ತೀಚೆಗೆ ರೋಹ್ಟಕ್ ನಲ್ಲಿ ನಡೆದ ವನಿತೆಯರ ಜೂನಿಯರ್ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 54 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. ಉಕ್ರೇನ್ ನಲ್ಲಿ ನಡೆಯಲಿರುವ ‘ವ್ಯಾಲೇರಿಯಾ ಡೆಮೈನೊವಾ ಸ್ಮಾರಕ' ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದರು.

  ಝಾಲಾಕ್ ತೋಮರ್ ಅವರಿಗೆ  ಉಕ್ರೇನ್ ನಲ್ಲಿ ತೆರಳಲು ಅವರ ಬಳಿ ಪಾಸ್ ಪೋರ್ಟ್ ಇರಲಿಲ್ಲ. ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ತಕ್ಷಣ ಪಾಸ್ ಪೋರ್ಟ್ ಸಿಗುವ ಸಾಧ್ಯತೆ ಇರಲಿಲ್ಲ.

ಝಾಲಾಕ್ ಪಾಸ್ ಪೋರ್ಟ್ ಪಡೆಯಲು ಬೇರೆ ದಾರಿ ಕಾಣದೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪಾಸ್ ಪೋರ್ಟ್ ತಕ್ಷಣ ಒದಗಿಸಿಕೊಡುವಂತೆ ಮನವಿ ಮಾಡಿದರು. ಪಾಸ್ ಪೋರ್ಟ್ ಅರ್ಜಿಯ ಪ್ರತಿಯನ್ನು ಅವರು ಟ್ವಿಟರ್‌  ಮೂಲಕ ಸಲ್ಲಿಸಿದ್ದರು.

ಝಲಾಕ್ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್ ತಕ್ಷಣ ಸಂಬಂಧಪಟ್ಟವರಲ್ಲಿ ಮಾತನಾಡಿ ಪಾಸ್ ಪೋರ್ಟ್ ಗೆ ವ್ಯವಸ್ಥೆ ಮಾಡಿದರು. “ನಿಮಗೆ ಪಾಸ್ ಪೋರ್ಟ್ ನಾಳೆ ಕೈ ಸೇರಬಹುದು. ನೀವು ಪದಕ ಗೆದ್ದು ಭಾರತ ಹೆಮ್ಮೆ ಪಡುವ ಸಾಧನೆ ಮಾಡಿ ” ಎಂದು ಹಾರೈಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)