varthabharthi

ಗಲ್ಫ್ ಸುದ್ದಿ

ಕೆ.ಸಿ.ಎಫ್. ಬಹರೈನ್ ವಾರ್ಷಿಕ ಮಹಾಸಭೆ

ವಾರ್ತಾ ಭಾರತಿ : 13 Nov, 2017

ಅಝೀಝ್, ಫಾರೂಕ್, ಹಾರಿಸ್

ಬಹರೈನ್, ನ.13: ಕೆ.ಸಿ.ಎಫ್. ಬಹರೈನ್ ವಾರ್ಷಿಕ ಮಹಾಸಭೆ ಮನಾಮ ಫುಡ್ ಸಿಟಿ  ರೆಸ್ಟೋರೆಂಟ್ ನಲ್ಲಿ ನಡೆಯಿತು .

ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಫಾರೂಕ್ ಎಸ್.ಎಂ  ವಹಿಸಿದ್ದರು. ಮನ್ಶರ್ ಅಕಾಡಮಿ ಚೈರ್ಮಾನ್ ಅಸೈಯ್ಯದ್ ಉಮರ್ ಅಸ್ಸಖಾಫ್ ತಂಙಳ್  ದುವಾದೊಂದಿಗೆ ಸಭೆಯು ಪ್ರಾರಂಭಗೊಂಡಿತು.

ಕೆ.ಸಿ.ಎಫ್. ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಬಾವ ಮಂಗಳೂರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಸಿ.ಎಫ್  ಐ ಎನ್ ಸಿ ಸಂಘಟನಾ ವಿಭಾಗದ ಅಧ್ಯಕ್ಷ ಪಿ.ಎಂ.ಎಚ್ ಈಶ್ವರಮಂಗಳ ಕೆ ಸಿ ಎಫ್ ಬಹರೈನ್ ಸಾಧನೆಯನ್ನು ಶ್ಲಾಘಿಸಿ, ಸಂಘಟನಾ ತರಬೇತಿಯನ್ನು ನೀಡಿದರು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸುಪ್ರೀಮ್ ಕೌನ್ಸಿಲ್ ಸದಸ್ಯ ಸಾದಿಕ್ ಮಾಸ್ಟರ್ ಮಲೆಬೆಟ್ಟು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.

ರಾಷ್ಟ್ರೀಯ ಅಧ್ಯಕ್ಷ ಫಾರೂಕ್ ಎಸ್. ಎಂ ಅಧ್ಯಕ್ಷೀಯ ಭಾಷಣದಲ್ಲಿ ಕೆ ಸಿ ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಉನ್ನತಿಗಾಗಿ ಸಹಕರಿಸಿದ ಎಲ್ಲರಿಗು ಕೃತಜ್ಞತೆ ಸಲ್ಲಿಸಿದರು.

ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಮಂಜನಾಡಿ  ವಾರ್ಷಿಕ ವರದಿಯನ್ನು ಮಂಡಿಸಿದರು. ಕೆ.ಸಿ.ಎಫ್ ಜನರಲ್ ಕನ್ವೀನರ್  ಅಝೀಝ್ ಸುಳ್ಯ ಲೆಕ್ಕ ಪತ್ರವನ್ನು ಮಂಡಿಸಿದರು. ಸಾಂತ್ವನ ವಿಭಾಗದ ಕಾರ್ಯದರ್ಶಿ ಕರೀಂ ಉಚ್ಚಿಲ್ , ಸಂಘಟನಾ ವಿಭಾಗದ ಅಧ್ಯಕ್ಷ ಬಶೀರ್ ಕಾರ್ಲೆ, ಶಿಕ್ಷಣ ವಿಭಾಗದ ಕಾರ್ಯದರ್ಶಿ  ಹಾರಿಸ್ ಸಂಪ್ಯ  ವರದಿಯನ್ನು ಮಂಡಿಸಿದರು. ಕೊನೆಯದಾಗಿ ಐ ಎನ್ ಸಿ ನೇತಾರರಾದ ಜಮಾಲುದ್ದೀನ್  ವಿಠ್ಠಲ್, ಅಲಿ ಮುಸ್ಲಿಯಾರ್  ನೂತನ ಸಮಿತಿ ಸಾರಥಿಗಳಿಗೆ ಶುಭಾಶಯವನ್ನು ಕೋರಿದರು. ಕಾರ್ಯಕ್ರಮದಲ್ಲಿ ಎಲ್ಲಾ ಸೆಕ್ಟರ್ ಹಾಗೂ ಝೋನ್ ಗಳ  ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕೆ.ಸಿ.ಎಫ್. ಬಹರೈನ್ ರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷ ಬಶೀರ್ ಕಾರ್ಲೆ ಸ್ವಾಗತಿಸಿದರು.

ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಕೆ.ಸಿ.ಎಫ್ ಬಹರೈನ್ ನೂತನ ಸಾರಥಿಗಳು

ಐ ಎನ್ ಸಿ ನೇತಾರರಾಗಿ ಅಲಿ ಮುಸ್ಲಿಯಾರ್, ಜಮಾಲುದ್ದೀನ್ ವಿಠ್ಠಲ್, ಫಕ್ರುದ್ದೀನ್ ಹಾಜಿ ಪೈಂಬಚ್ಚಾಲ್, ಅಧ್ಯಕ್ಷರಾಗಿ ಫಾರೂಕ್ ಎಸ್ ಎಂ, ಕಾರ್ಯದರ್ಶಿಯಾಗಿ ಹಾರಿಸ್ ಸಂಪ್ಯ, ಕೋಶಾಧಿಕಾರಿಯಾಗಿ ಅಝೀಝ್ ಸುಳ್ಯ, ಸಂಘಟನಾ ಅಧ್ಯಕ್ಷರಾಗಿ ಇಕ್ಬಾಲ್ ಮಂಜನಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸಮದ್ ಉಜಿರೆಬೆಟ್ಟು, ಶಿಕ್ಷಣ ಅಧ್ಯಕ್ಷರಾಗಿ ಕಲಂದರ್ ಷರೀಫ್ ಕಕ್ಯಪದವು, ಶಿಕ್ಷಣ ಕಾರ್ಯದರ್ಶಿ :  ತೌಫೀಕ್ ಉಮರ್ ಬೆಳ್ತಂಗಡಿ, ಅಡ್ಮಿನ್ ಅಧ್ಯಕ್ಷರು : ಬಶೀರ್ ಕಾರ್ಲೆ, ಅಡ್ಮಿನ್ ಕಾರ್ಯದರ್ಶಿ : ಸೂಫಿ ಪೈಂಬಚ್ಚಾಲ್, ಪಬ್ಲಿಕೇಷನ್ ಅಧ್ಯಕ್ಷರಾಗಿ ನಾಸಿರ್ ನಾಳ, ಪಬ್ಲಿಕೇಷನ್ ಕಾರ್ಯದರ್ಶಿ : ಲತೀಫ್ ಪೆರೋಲಿ, ಸಾಂತ್ವನ ಅಧ್ಯಕ್ಷ : ಕರೀಂ ಉಚ್ಚಿಲ, ಸಾಂತ್ವನ ಕಾರ್ಯದರ್ಶಿ : ಅಶ್ರಫ್ ಕಿನ್ಯ, ಇಹ್ಸಾನ್ ಅಧ್ಯಕ್ಷ : ಹನೀಫ್ ಕಿನ್ಯ , ಇಹ್ಸಾನ್ ಕಾರ್ಯದರ್ಶಿ : ಮಜೀದ್ ಮಾದಾಪುರ , ಐ ಟೀಮ್ ಕನ್ವಿನರ್ : ರಿಯಾಝ್ ಸುಳ್ಯ, ಕಾರ್ಯಕಾರಿ ಸಮಿತಿ ಸದಸ್ಯರು : ಮುಝಮ್ಮಿಲ್ ಕೋಲ್ಪೆ, ಅಬೂಬಕ್ಕರ್ ಮಾದಾಪುರ , ಸಯ್ಯದ್ ಇರ್ದೆ , ಹನೀಫ್ ಗುರುವಾಯನಕೆರೆ, ಅಲಿ ಹಾಜಿ  ಚೆನ್ನಾರ್, ಝಕರಿಯಾ ಎನ್ಮೂರು, ಹೈದರ್ ಸ ಅದಿ, ಸಿದ್ದೀಕ್ ಉಸ್ತಾದ್ ಮಂಜನಾಡಿ, ಅಬೂಬಕರ್ ಮದನಿ, ಮಜೀದ್ ಮುಕ್ಕ, ಅಶ್ರಫ್ ಬೇಂಗಿಲ, ಮುಹ್ಸಿನ್ ಸುಳ್ಯ, ಶಾಫಿ ಕಬಕ, ಸುಹೈಲ್ ಬಿ ಸಿ ರೋಡ್ , ಮನ್ಸೂರ್ ಬೆಲ್ಮ, ಅಶ್ರಫ್ ರೆಂಜಾಡಿ ಆಯ್ಕೆಯಾದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)