varthabharthi

ಕರಾವಳಿ

ತೊಕ್ಕೊಟ್ಟು: ರೈಲು ಢಿಕ್ಕಿ ಹೊಡೆದು ಓರ್ವ ಮೃತ್ಯು

ವಾರ್ತಾ ಭಾರತಿ : 13 Nov, 2017

ತೊಕ್ಕೊಟ್ಟು, ನ. 13: ತೊಕ್ಕೊಟ್ಟು ನಲ್ಲಿ ರೈಲು ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಪುತ್ತೂರು ಸಾಮೆತಡ್ಕ ನಿವಾಸಿ ದಾಮೋದರ (41)  ಎಂದು ಗುರುತಿಸಲಾಗಿದೆ.

ರೈಲು ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಸ್ಥಳಕ್ಕಾಗಮಿಸಿದ ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.

 

Comments (Click here to Expand)