varthabharthi

ರಾಷ್ಟ್ರೀಯ

'ಕೊಳಕು ರಾಜಕೀಯ' ಎಂದ ಪಾಟಿದಾರ್ ನಾಯಕ

ಹಾರ್ದಿಕ್ ಪಟೇಲ್ ರದ್ದು ಎನ್ನಲಾದ ಸೆಕ್ಸ್ ಸಿಡಿ ವೈರಲ್!

ವಾರ್ತಾ ಭಾರತಿ : 13 Nov, 2017

ಹೊಸದಿಲ್ಲಿ, ನ.13: ಗುಜರಾತ್ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯ ರಾಜಕಾರಣವು ವಿವಾದ, ಕೀಳುಮಟ್ಟದ ರಾಜಕೀಯಕ್ಕೆ ವೇದಿಕೆಯಾಗುತ್ತಿದೆ. ಇದೀಗ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ ನಾಯಕ ಹಾರ್ದಿಕ್ ಪಟೇಲ್ ರದ್ದು ಎನ್ನಲಾದ ಖಾಸಗಿ ದೃಶ್ಯಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹಾರ್ದಿಕ್ ಪಟೇಲ್ ಕಾಂಗ್ರೆಸ್ ಜೊತೆ ಕೈಜೋಡಿಸಿರುವಂತೆಯೇ ಈ ವಿಡಿಯೋ ಇಂದು ಲೀಕ್ ಆಗಿದೆ. ಕೋಣೆಯೊಂದರಲ್ಲಿ ಓರ್ವ ಯುವತಿ ಹಾಗು ಯುವಕನ ಖಾಸಗಿ ದೃಶ್ಯಗಳು ವಿಡಿಯೋದಲ್ಲಿದೆ.

ಆದರೆ ಈ ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. “ಕೊಳಕು ರಾಜಕೀಯ ಆರಂಭಗೊಂಡಿದೆ. ನನ್ನನ್ನು ಅವಮಾನಿಸುವುದರಿಂದ ಯಾವುದೇ ಬದಲಾಣೆಯಾಗುವುದಿಲ್ಲ. ಆದರೆ ಗುಜರಾತಿ ಮಹಿಳೆಯರ ಹೆಸರಿಗೆ ಕಳಂಕ ತಂದಿದೆ” ಎಂದವರು ಇಂದು ಟ್ವೀಟ್ ಮಾಡಿದ್ದಾರೆ.

ಇಂತಹ ವಿಡಿಯೋ ಲೀಕ್ ಆಗುವುದರ ಬಗ್ಗೆ  ಈ ಹಿಂದೆಯೇ ಹಾರ್ದಿಕ್ ಮಾತನಾಡಿದ್ದರು. “ನನ್ನನ್ನು ಅಪಮಾನಿಸಲು ಬಿಜೆಪಿಯು ನಕಲಿ ಸೆಕ್ಸ್ ಸಿಡಿಯನ್ನು ತಯಾರಿಸಿದೆ. ಚುನಾವಣೆಗೆ ಸ್ವಲ್ಪ ಮೊದಲು ಇದು ಬಿಡುಗಡೆಯಾಗಲಿದೆ. ಇದರಿಂದ ಹೊರತಾಗಿ ನಾವು ಬಿಜೆಪಿಯಿಂದ ಏನನ್ನು ನಿರೀಕ್ಷಿಸಬಹುದು” ಎಂದು ನವೆಂಬರ್ 10ರಂದು ಹಾರ್ದಿಕ್ ಹೇಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)