varthabharthi

ರಾಷ್ಟ್ರೀಯ

ಐಇಡಿ ಸ್ಫೋಟ: ಅಸ್ಸಾಂ ರೈಫಲ್ಸ್‌ನ ಇಬ್ಬರು ಯೋಧರು ಹುತಾತ್ಮ

ವಾರ್ತಾ ಭಾರತಿ : 13 Nov, 2017

ಇಂಪಾಲ, ನ. 13: ಮಣಿಪುರದ ಚಂಡೇಲ್ ಜಿಲ್ಲೆಯ ಚಂಡೇಲ್ ಪಟ್ಟಣದಲ್ಲಿ ಸೋಮವಾರ ಮುಂಜಾನೆ ಸುಧಾರಿತ ಸ್ಫೋಟಕ ಸ್ಫೋಟಿಸಿದ ಪರಿಣಾಮ ಅಸ್ಸಾಂ ರೈಫಲ್ಸ್‌ನ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ 6 ಮಂದಿ ಯೋಧರು ಗಾಯಗೊಂಡಿದ್ದಾರೆ.

ರಾಜ್ಯ ರಾಜಧಾನಿಯಿಂದ 64 ಕಿ.ಮೀ. ದೂರದಲ್ಲಿರುವ ಚಂಡೇಲ್ ಪಟ್ಟಣದ ಮಹಾ ಮನಿ ಗ್ರಾಮದಲ್ಲಿ ಅಸ್ಸಾಂ ರೈಫಲ್ಸ್ ತಂಡ ಗಸ್ತು ನಡೆಸುತ್ತಿದ್ದಾಗ ಈ ಸುಧಾರಿತ ಸ್ಫೋಟಕ ಸ್ಫೋಟಗೊಂಡಿದೆ.

ಸ್ಫೋಟದಿಂದ ಓರ್ವ ಯೋಧ ಸ್ಥಳದಲ್ಲೇ ಹುತಾತ್ಮನಾರೆ, 7 ಮಂದಿ ಗಾಯಗೊಂಡರು. ಗಂಭೀರ ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಇನ್ನೋರ್ವ ಯೋಧ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಯೋಧರನ್ನು ಇಂದ್ರಾ ಸಿಂಗ್ ಹಾಗೂ ಸೋಹನ್ ಲಾನ್ ಎಂದು ಗುರುತಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)