varthabharthi

ನಿಧನ

ಹಸೈನಾರ್

ವಾರ್ತಾ ಭಾರತಿ : 13 Nov, 2017

ಕಾಸರಗೋಡು, ನ. 13:   ಉಮ್ರಾ ನಿರ್ವಹಿಸಿ ವಾಸ ಸ್ಥಳಕ್ಕೆ ಮರಳುತ್ತಿದ್ದ  ಪೆರ್ಲ  ನಿವಾಸಿಯೋರ್ವರು ಕುಸಿದು ಬಿದ್ದು  ನಿಧನರಾದ ಘಟನೆ ನಡೆದಿದೆ.

ಮಣಿಯಂಪಾರೆ ಶೇಣಿ  ಪೆರ್ದನೆಯ  ಹಸೈನಾರ್  (78) ಮೃತರು ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಉಮ್ರಾಕ್ಕೆ ತೆರಳಿದ್ದರು. ಉಮ್ರಾ ನಿರ್ವಹಿಸಿ ರವಿವಾರ  ರಾತ್ರಿ  ಮರಳುತ್ತಿದ್ದ ವೇಳೆ ಉಸಿರಾಟ ತೊಂದರೆ ಕಾಣಿಸಿಕೊಂಡು  ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಮೃತರು ಪತ್ನಿ ಹಾಗೂ ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ. 

 

Comments (Click here to Expand)