varthabharthi

ಅಂತಾರಾಷ್ಟ್ರೀಯ

ಸಿರಿಯ ಸರಕಾರದಿಂದ ಮಾನವತೆ ವಿರುದ್ಧ ಅಪರಾಧ: ಆ್ಯಮ್ನೆಸ್ಟಿ

ವಾರ್ತಾ ಭಾರತಿ : 13 Nov, 2017

ಲಂಡನ್, ನ. 13: ಪ್ರತಿಪಕ್ಷಗಳೊಂದಿಗೆ ರಾಜಿ ಒಪ್ಪಂದಕ್ಕೆ ಬರುವ ಮುನ್ನ, ತನ್ನ ಪ್ರಜೆಗಳಿಗೆ ಮುತ್ತಿಗೆ ಹಾಕುವ ಸಿರಿಯ ಸರಕಾರದ ಕ್ರಮಗಳು ಮಾನವತೆಯ ವಿರುದ್ಧದ ಅಪರಾಧ ಮತ್ತು ಯುದ್ಧಾಪರಾಧವಾಗುತ್ತದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸೋಮವಾರ ಹೇಳಿದೆ.

ನಾಲ್ಕು ಸ್ಥಳೀಯ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ, ನಾಗರಿಕರನ್ನು ಅವರ ಮನೆಗಳಿಂದ ಹೊರದಬ್ಬುವ ಉದ್ದೇಶದಿಂದ ಅಕ್ರಮ ಮುತ್ತಿಗೆಗಳನ್ನು ಹಾಕಲಾಗಿತ್ತು ಹಾಗೂ ಬಾಂಬ್ ದಾಳಿಗಳನ್ನು ನಡೆಸಲಾಗಿತ್ತು ಎಂದು ‘ವೀ ಲೀವ್ ಆರ್ ವೀ ಡೈ’ ಎಂಬ ತನ್ನ ವರದಿಯಲ್ಲಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.

 

Comments (Click here to Expand)