varthabharthi

ಅಂತಾರಾಷ್ಟ್ರೀಯ

ದ. ಕೊರಿಯಕ್ಕೆ ಪಲಾಯನ: ಉ. ಕೊರಿಯ ಸೈನಿಕನಿಗೆ ಗುಂಡು

ವಾರ್ತಾ ಭಾರತಿ : 13 Nov, 2017

ಸಿಯೋಲ್, ನ. 13: ಉತ್ತರ ಕೊರಿಯದ ಸೈನಿಕನೊಬ್ಬ ಸೋಮವಾರ ಪನ್ಮುಂಜೊಮ್ ಗ್ರಾಮದಲ್ಲಿ ದಕ್ಷಿಣ ಕೊರಿಯಕ್ಕೆ ಪಲಾಯನಗೈಯುತ್ತಿದ್ದಾಗ ಅವರದೇ ಸೈನಿಕರು ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ ಎಂದು ದಕ್ಷಿಣ ಕೊರಿಯದ ಸೇನೆ ತಿಳಿಸಿದೆ.

ಪನ್ಮುಂಜೊಮ್ ಗ್ರಾಮದಲ್ಲಿರುವ ಜಂಟಿ ಭದ್ರತಾ ಪ್ರದೇಶದ ದಕ್ಷಿಣ ಕೊರಿಯದ ಭಾಗಕ್ಕೆ ಉತ್ತರ ಕೊರಿಯ ಸೈನಿಕ ದಾಟಿ ಬಂದರು ಎಂದು ದಕ್ಷಿಣ ಕೊರಿಯ ಸೇನ ಮುಖ್ಯಸ್ಥರು ಹೇಳಿಕೆಯೊಂದರಲ್ಲಿ ತಿಳಿಸಿದರು.

ಉಭಯ ದೇಶಗಳ ನಡುವಿನ ಗಡಿಯಲ್ಲಿರುವ ಏಕೈಕ ಸೇನಾರಹಿತ ಪ್ರದೇಶ ಪನ್ಮುಂಜೊಮ್ ಆಗಿದೆ. ಇಲ್ಲಿ ಎರಡೂ ದೇಶಗಳ ಸೈನಿಕರು ಎದುರು ಬದುರಾಗುತ್ತಾರೆ.

ಗಾಯಗೊಂಡ ಸೈನಿಕನನ್ನು ಬಳಿಕ ದಕ್ಷಿಣ ಕೊರಿಯದ ಸೈನಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Comments (Click here to Expand)