varthabharthi

ಅಂತಾರಾಷ್ಟ್ರೀಯ

ಈ ವರ್ಷ ಇಂಗಾಲ ಹೊರಸೂಸುವಿಕೆ ಪ್ರಮಾಣ 2 ಶೇ. ಹೆಚ್ಚು

ವಾರ್ತಾ ಭಾರತಿ : 13 Nov, 2017

ಬಾನ್ (ಜರ್ಮನಿ), ನ. 13: ಈ ವರ್ಷ ಜಾಗತಿಕ ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಪ್ರಮಾಣ 2 ಶೇಕಡದಷ್ಟು ಹೆಚ್ಚಲಿದ್ದು, ನೂತನ ದಾಖಲೆಯಾಗಲಿದೆ ಎಂದು ವಿಜ್ಞಾನಿಗಳು ಸೋಮವಾರ ಹೇಳಿದ್ದಾರೆ.

ಇಂಗಾಲ ಹೊರಸೂಸುವಿಕೆಯ ಮಟ್ಟ 2014ರಿಂದ 2016ರವರೆಗೆ ಹೆಚ್ಚುಕಡಿಮೆ ಒಂದೇ ಮಟ್ಟದಲ್ಲಿತ್ತು. ಆದರೆ, ಚೀನಾದಲ್ಲಿ ಎರಡು ವರ್ಷಗಳ ಇಳಿಮುಖದ ಬಳಿಕ ಈ ಬಾರಿ ಇಂಗಾಲ ಹೊರಸೂಸುವಿಕೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಹೆಚ್ಚಳ ಸಂಭವಿಸಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಳವು ಈಗಾಗಲೇ ಅತಿ ಮಳೆ, ಅತಿ ಶಾಖ ಮತ್ತು ಸಮುದ್ರಗಳ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ.

 

Comments (Click here to Expand)