varthabharthi

ರಾಷ್ಟ್ರೀಯ

ಪ್ರದ್ಯುಮ್ನ ಹತ್ಯೆ: ತಪ್ಪೊಪ್ಪಿಕೊಂಡ ಪೊಲೀಸ್ ತನಿಖಾ ತಂಡ

ವಾರ್ತಾ ಭಾರತಿ : 13 Nov, 2017

ಹೊಸದಿಲ್ಲಿ, ನ.13: ಏಳು ವರ್ಷದ ಪ್ರದ್ಯುಮ್ನ ಠಾಕೂರ್‌ನ ಹತ್ಯೆ ಪ್ರಕರಣದ ತನಿಖೆಯಲ್ಲಿ ತಪ್ಪಾಗಿರುವುದನ್ನು ಹರ್ಯಾಣ ಪೊಲೀಸರು ಒಪ್ಪಿಕೊಂಡಿದ್ದಾರೆ.

ಗುರ್ಗಾಂವ್‌ನ ಪೊಲೀಸ್ ಆಯುಕ್ತ ಸಂದೀಪ್ ಖಿರ್ವಾಲ ಸಭೆ ಕರೆದು ಮೊದಲ ತನಿಖಾ ತಂಡದ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಆರಂಭದಲ್ಲಿ ಬಸ್ ನಿರ್ವಾಹಕ ಅಶೋಕ್ ಕುಮಾರ್ ಅವರನ್ನು ಶಿಶುಕಾಮಿ ಎಂದು ಬಂಧಿಸಿರುವುದನ್ನು ತಪ್ಪೆಂದು ತನಿಖಾ ತಂಡ ಒಪ್ಪಿಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಸರಿಯಾಗಿ ವೀಕ್ಷಿಸಿಲ್ಲ ಎಂದು ತಂಡದ ಅಧಿಕಾರಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)