varthabharthi

ರಾಷ್ಟ್ರೀಯ

ಭಾರತದಲ್ಲಿ ಕೀಟನಾಶಕಗಳ ವ್ಯಾಪಕ ಬಳಕೆ :ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೊಟೀಸು

ವಾರ್ತಾ ಭಾರತಿ : 13 Nov, 2017

ಹೊಸದಿಲ್ಲಿ, ನ. 13: ಭಾರತದಲ್ಲಿ ಕೀಟನಾಶಕಗಳ ವ್ಯಾಪಕ ಬಳಕೆಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸು ಜಾರಿ ಮಾಡಿದೆ ಹಾಗೂ ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿದೆ.

ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ನಿಯಂತ್ರಿಸಲು ನೀತಿ ರೂಪಿಸುವಂತೆ ಆಗ್ರಹಿಸಿ ನ್ಯಾಯವಾದಿ ಪ್ರಶಾಂತ್ ಭೂಷಣ್ ದಾವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.

ರಾಸಾಯನಿಕ ಕೀಟನಾಶಕವನ್ನು ಕ್ರಮೇಣ ದೂರ ಮಾಡಲು ಪ್ರಶಾಂತ್ ಭೂಷಣ್ ಬಯಸಿದ್ದಾರೆ. ವಿದೇಶದಲ್ಲಿ ನಿಷೇಧ ವಿಧಿಸಲಾದ ಸುಮಾರು 93 ಮಾದರಿಯ ಕೀಟನಾಶಕಗಳನ್ನು ಭಾರತದಲ್ಲಿ ಬಳಸಲಾಗುತ್ತದೆ.

 

Comments (Click here to Expand)