varthabharthi

ರಾಷ್ಟ್ರೀಯ

ಸಮ-ಬೆಸ: ದಿಲ್ಲಿ ಸರಕಾರ ಎನ್‌ಜಿಟಿಗೆ

ವಾರ್ತಾ ಭಾರತಿ : 13 Nov, 2017

ಹೊಸದಿಲ್ಲಿ, ನ. 13: ಸಮ-ಬೆಸ ವಾಹನ ಸಂಚಾರದ ಕುರಿತ ನವೆಂಬರ್ 11ರ ಆದೇಶಕ್ಕೆ ತಿದ್ದುಪಡಿ ಕೋರಿ ದಿಲ್ಲಿ ಸರಕಾರ ಸೋಮವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸಂಪರ್ಕಿಸಿದೆ.

ಈ ಮನವಿಯನ್ನು ನಾಳೆ ವಿಚಾರಣೆ ನಡೆಸಲಾಗುವುದು ಎಂದು ಹಸಿರು ನ್ಯಾಯ ಮಂಡಳಿ ತಿಳಿಸಿದೆ.

ನವೆಂಬರ್ 13ರಿಂದ ಐದು ದಿನಗಳ ಕಾಲ ಸಮ-ಬೆಸ ವಾಹನ ಸಂಚಾರ ಯೋಜನೆ ಜಾರಿಗೊಳಿಸುವ ಎಎಪಿ ಸರಕಾರದ ನಿರ್ಧಾರಕ್ಕೆ ನವೆಂಬರ್ 11ರಂದು ಶರತ್ತುಬದ್ಧ ಅನುಮತಿ ನೀಡಿರುವ ರಾಷ್ಟ್ರೀಯ ಹಸಿರು ಮಂಡಳಿ, ಯಾವುದೇ ವ್ಯಕ್ತಿ, ಅಧಿಕಾರಿಗಳು ಹಾಗೂ ದ್ವಿಚಕ್ರ ವಾಹನಗಳಿಗೆ ವಿನಾಯತಿ ನೀಡಬಾರದು ಎಂದು ಆದೇಶಿಸಿತ್ತು.

 

Comments (Click here to Expand)