varthabharthi

ಕರಾವಳಿ

ಸ್ಕೂಟರ್ ಕಳವು

ವಾರ್ತಾ ಭಾರತಿ : 13 Nov, 2017

ಮಂಗಳೂರು, ನ. 13: ಕಾರ್‌ಸ್ಟ್ರೀಟ್ ಸಮೀಪ ನಿಲ್ಲಿಸಿದ ಹೊಂಡಾ ಆ್ಯಕ್ಟೀವಾ ಸ್ಕೂಟರ್‌ ಕಳವು ಮಾಡಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರ್‌ಸ್ಟ್ರೀಟ್‌ನ ಪುನೀತ್ ಎಂಬವರು ನ.9ರಂದು ಬೆಳಗ್ಗೆ 7:15ಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಿ ಸೈಟಿಗೆ ಹೋಗಿ ಅರ್ಧ ಗಂಟೆ ಬಿಟ್ಟು ವಾಪಾಸು ಬಂದು ನೋಡುವಾಗ ಸ್ಕೂಟರ್ ಕಳವಾಗಿತ್ತು. ಅಕ್ಕ ಪಕ್ಕದಲ್ಲಿ ಹುಡುಕಾಡಿ ಇತರರಲ್ಲಿ ವಿಚಾರಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರು ನೀಡಲಾಗಿದೆ.

ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments (Click here to Expand)