varthabharthi

ಕರ್ನಾಟಕ

ಅಂತಿಮ ಹಂತದಲ್ಲಿ ಮನೆ ಮನೆಗೆ ಕಾಂಗ್ರೆಸ್: ರಝಾಕ್

ವಾರ್ತಾ ಭಾರತಿ : 13 Nov, 2017

ಮಡಿಕೇರಿ, ನ.13: ನಗರ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಅಭಿಯಾನ ಅಂತಿಮ ಹಂತವನ್ನು ತಲುಪಿದ್ದು, ನಗರದ 23 ವಾರ್ಡ್‌ಗಳಲ್ಲಿ 19 ವಾರ್ಡ್ ಪೂರ್ಣಗೊಂಡಿವೆ. ಉಳಿದ 4 ವಾರ್ಡ್‌ಗಳ ಮನೆ ಮನೆ ಭೇಟಿಯನ್ನು ಮೂರು ದಿನಗಳಲ್ಲಿ ಮುಗಿಸುವುದಾಗಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಝಾಕ್ ತಿಳಿಸಿದ್ದಾರೆ.

ಸೋಮವಾರ ನಗರದ ವಿವಿಧ ಬಡಾವಣೆಯಲ್ಲಿ ಕಾಂಗ್ರೆಸ್ ನಡಿಗೆ ಅಭಿಯಾನ ನಡೆಸಿದ ಅವರು, ನಗರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಅಭಿಪ್ರಾಯಪಟ್ಟರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಕೆ.ಯು.ಅಬ್ದುಲ್ ರಝಾಕ್ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಿಕಾ ಲೇಔಟ್‌ನಿಂದ ಡೈರಿ ಫಾರಂ, ಐ.ಟಿ.ಐ. ಜಂಕ್ಷನ್, ಕಾನ್ವೆಂಟ್ ಜಂಕ್ಷನ್, ಫೀ.ಮಾ.ಕಾರ್ಯಪ್ಪ ಕಾಲೇಜು ಹಿಂಭಾಗ, ವಿದ್ಯಾನಗರ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ನಡಿಗೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ನೀಡಿದರು.
 
ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮಾಜಿ ಸದಸ್ಯರಾದ ಟಿ.ಯಂ.ಅಯ್ಯಪ್ಪ, ಸುನಿಲ್ ನಂಜಪ್ಪ, ಫಿಲೋಮಿನ, ಮೂಡಾ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರಾದ ತಜಸುಂ, ಪ್ರಕಾಶ್ ಆಚಾರ್ಯ, ಜುಲೆಕಾಬಿ, ಕಾರ್ಯದರ್ಶಿ ಪ್ರಭು ರೈ, ಪ್ರಮುಖರಾದ ಟಿ.ವಿ.ನಾಣಯ್ಯ, ಇಬ್ರಾಹಿಂ, ಇಸ್ಮಾಯಿಲ್ ಮಹಮ್ಮದ್, ಚಂದ್ರಶೇಖರ್, ಯೂಸುಫ್, ಸದಾ ಮುದ್ದಪ್ಪ, ಇಸ್ಮಾಯಿಲ್, ಜಫರ್ ಉಲ್ಲಾ, ಮುನೀರ್, ಸುಧಾಯ್ ನಾಣಯ್ಯ, ಎಂ.ಎಂ.ಹನೀಫ್, ಉಸ್ಮಾನ್ ಮೊದಲಾದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)