varthabharthi

ಕರ್ನಾಟಕ

ಭಕ್ತರಿಗೆ ಪೊಲೀಸ್ ನೋಟಿಸ್ ಆರೋಪ: ಬಿಜೆಪಿ ಖಂಡನೆ

ವಾರ್ತಾ ಭಾರತಿ : 14 Nov, 2017

ಚಿಕ್ಕಮಗಳೂರು, ನ.13: ದತ್ತ ಭಕ್ತರ ಮೇಲೆ ಪೊಲೀಸ್ ಇಲಾಖೆ ದೂರು ದಾಖಲಿಸುವ ಮುಖಾಂತರ ಭಕ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಿಸಿದ್ಧಿ ವೇಣುಗೋಪಾಲ್ ಆರೋಪಿಸಿದ್ದಾರೆ.

ಅವರು ಈ ಕುರಿತು ಸೋಮವಾರ ಹೇಳಿಕೆ ನೀಡಿದ್ದು, ನ.23ರಿಂದ ದತ್ತ ಮಾಲಾ ಅಭಿಯಾನ ರಾಜ್ಯ ವ್ಯಾಪಿ ನಡೆಯಲಿದ್ದು, ಇದಕ್ಕೆ ಸಾವಿರಾರು ಭಕ್ತರು ದತ್ತ ಮಾಲೆ ಧರಿಸಿ ಡಿ.3ರಂದು ನಡೆಯುವ ದತ್ತ ಜಯಂತಿ ಉತ್ಸವಕ್ಕೆ ಆಗಮಿಸುತ್ತಿದ್ದು, ಇವರ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯಾ ಪಿಎಸ್ಸೈಗಳು ದೂರು ದಾಖಲಿಸಿ ಸ್ಥಳೀಯ ತಹಶೀಲ್ದಾರರ ಮುಖಾಂತರ 1 ಲಕ್ಷ ರೂ.ಬಾಂಡ್ ಅನ್ನು ಬರೆದುಕೊಡುವಂತೆ ನೋಟಿಸ್ ನೀಡುತ್ತಿದ್ದು, ಇದು ಖಂಡನೀಯ ಎಂದರು.

ಈ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಒತ್ತಾಯಿಸಿದರು.

 

Comments (Click here to Expand)