varthabharthi

ನಿಮ್ಮ ಅಂಕಣ

ಮುತಾಲಿಕರನ್ನು ಅನುಸರಿಸುತ್ತಿರುವ ಪ್ರಮೋದ್

ವಾರ್ತಾ ಭಾರತಿ : 14 Nov, 2017
- ಶಿರೀಶ್ ಪಿಂಟೋ, ಉಡುಪಿ

ಮಾನ್ಯರೆ,

ಸಚಿವ ಪ್ರಮೋದ್ ಮಧ್ವರಾಜ್ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಉಡುಪಿಯಲ್ಲಿ ಜರುಗಿದ ಟಿಪ್ಪುಜಯಂತಿ ಕಾರ್ಯಕ್ರಮವನ್ನು ಕಾರ್ಯತಃ ಬಹಿಷ್ಕರಿಸಿದ್ದಾರೆ. ಸಾಲದ್ದಕ್ಕೆ, ಈ ಕುರಿತು ಸ್ಪಷ್ಟೀಕರಣ ಕೇಳಿದವರಿಗೆ ತೀರಾ ಉಡಾಫೆಯ ಉದ್ಧಟ ಉತ್ತರ ನೀಡಿದ್ದಾರೆ. ಇವರು ಜಾತ್ಯತೀತ ತತ್ವಾದರ್ಶಗಳಲ್ಲಿ ವಿಶ್ವಾಸವುಳ್ಳ ಯುವ ನಾಯಕ ಎಂದು ನಂಬಿ ಇವರನ್ನು ಬೆಂಬಲಿಸಿದ್ದ ಎಲ್ಲ ಮತದಾರರಿಗೆ ಇದರಿಂದ ತೀವ್ರ ನಿರಾಶೆಯಾಗಿದೆ. ಕಾಂಗ್ರೆಸ್ ಪಕ್ಷದ ಆಶ್ರಯದಲ್ಲಿ ಶಾಸಕರಾಗಿ ಆ ಬಳಿಕ ಸಚಿವರಾದ ಪ್ರಮೋದ್‌ರಿಗೆ ಮಹಾನ್ ದೇಶ ಭಕ್ತ ಹಾಗೂ ಸ್ವಾತಂತ್ರ ಹೋರಾಟಗಾರರಾಗಿದ್ದ ಟಿಪ್ಪುವಿನ ಮೇಲೆ ಅಷ್ಟೊಂದು ದ್ವೇಷ ಏಕೆ ಎಂದು ಜನರಿಗೆ ಅರ್ಥವಾಗುತ್ತಿಲ್ಲ. ಇವರು ಬಿಜೆಪಿ ಸೇರಲಿದ್ದಾರೆ ಎಂಬ ದಟ್ಟ ವದಂತಿಗಳು ಚಲಾವಣೆಯಲ್ಲಿರುವಾಗಲೇ ಇವರು ಈ ರೀತಿ ಬಜರಂಗಿ ಧೋರಣೆಯನ್ನು ಪ್ರದರ್ಶಿಸುವ ಮೂಲಕ ಪ್ರಸ್ತುತ ವದಂತಿಗಳಿಗೆ ಮತ್ತಷ್ಟು ಬಲ ಒದಗಿಸಿದ್ದಾರೆ. ಒಟ್ಟಿನಲ್ಲಿ ಇವರ ಮೇಲೆ ನಂಬಿಕೆ ಇಟ್ಟು ಇವರನ್ನು ಬೆಂಬಲಿಸಿದ ಮತದಾರರು ನಾವೇನು ಪ್ರಮೋದ್ ಮುತಾಲಿಕ್ ರಿಗೆ ಮತ ನೀಡಿದ್ದೇವೆಯೇ ಎಂದು ಸಂಶಯಿಸುವಂತಾಗಿದೆ. 

 

Comments (Click here to Expand)