varthabharthi

ಕ್ರೀಡೆ

ವಿಭಿನ್ನ ಶೈಲಿಯ ಬೌಲಿಂಗ್ ನಿಂದ ಗಮನ ಸೆಳೆದ ಲಂಕೆಯ ಕೆವಿನ್

ವಾರ್ತಾ ಭಾರತಿ : 14 Nov, 2017

ಕೊಲಂಬೊ, ನ.13: ಅಸಾಂಪ್ರದಾಯಿಕ ಶೈಲಿಯಲ್ಲಿ ಬೌಲಿಂಗ್ ಮಾಡುವ ಸ್ಪಿನ್ನರ್‌ಗಳು ಬೇಗನೆ ಪ್ರಸಿದ್ಧಿ ಪಡೆಯುತ್ತಾರೆ. ಈಗ ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾದ 18ರ ಹರೆಯದ ಬೌಲರ್ ಕೆವಿನ್ ಕೊಥಗೋಡಿಯಾ ವಿಭಿನ್ನ ಶೈಲಿಯ ಬೌಲಿಂಗ್‌ನಿಂದ ಗಮನಸೆಳೆಯುತ್ತಿದ್ದಾರೆ.

ಲೆಗ್ ಸ್ಪಿನ್ನರ್ ಕೆವಿನ್ ದಕ್ಷಿಣ ಆಫ್ರಿಕದ ಮಾಜಿ ಚೈನಾಮನ್ ಬೌಲರ್ ಪಾಲ್ ಆಡಮ್ಸ್ ಶೈಲಿಯಂತೆಯೇ ಬೌಲಿಂಗ್ ಮಾಡುತ್ತಾರೆ.

  ಬಲಗೈ ಲೆಗ್ ಸ್ಪಿನ್ನರ್ ಕೆವಿನ್ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದು, ಆ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದರು.

‘‘ಕೆವಿನ್ ಅವರು ಪಾಲ್ ಆ್ಯಡಮ್ಸ್ ತರಹವೇ ಬೌಲಿಂಗ್ ಮಾಡುತ್ತಾರೆ. ಈ ಶೈಲಿಯು ಅವರಿಗೆ ಹೇಳಿಕೊಟ್ಟಿರುವುದಲ್ಲ. ಈ ಶೈಲಿ ಅವರಿಗೆ ಸಹಜವಾಗಿ ಬಂದಿದೆ. ಆರಂಭದಲ್ಲಿ ಅವರು ಸಮಸ್ಯೆ ಎದುರಿಸಿದ್ದರು. ನಿಧಾನವಾಗಿ ಹೊಸಶೈಲಿಯನ್ನು ರೂಢಿಸಿಕೊಂಡಿದ್ದಾರೆ’’ ಎಂದು ಶ್ರೀಲಂಕಾ ‘ಎ’ ತಂಡದ ಮಾಜಿ ಆಟಗಾರ ಸುದರ್ಶನ್ ಹೇಳಿದ್ದಾರೆ.

 

Comments (Click here to Expand)