varthabharthi

ಕ್ರೀಡೆ

ಬೆಲಾರಸ್ ನ್ನು ಮಣಿಸಿದ ಅಮೆರಿಕಕ್ಕೆ ಫೆಡ್ ಕಪ್

ವಾರ್ತಾ ಭಾರತಿ : 14 Nov, 2017

ನ್ಯೂಯಾರ್ಕ್, ನ.13: ಬೆಲಾರಸ್ ತಂಡವನ್ನು ಮಣಿಸಿದ ಅಮೆರಿಕ 17 ವರ್ಷಗಳ ಬಳಿಕ ಫೆಡ್ ಕಪ್‌ನ್ನು ಗೆದ್ದುಕೊಂಡಿದೆ.

  ರವಿವಾರ ನಡೆದ ನಿರ್ಣಾಯಕ ಮಹಿಳೆಯರ ಟೆನಿಸ್‌ನ ಡಬಲ್ಸ್ ಪಂದ್ಯದಲ್ಲಿ ಶೆಲ್ಬಿ ರೊಜರ್ಸ್ ಹಾಗೂ ಕೊಕೊ ವ್ಯಾಂಡ್‌ವೆಘ್ ಬೆಲಾರಸ್‌ನ ಅರ್ಯನಾ ಸಬಲೆಂಕಾ ಹಾಗೂ ಅಲಿಯಕ್‌ಸಂಡ್ರಾ ಸಸ್ನೊವಿಕ್‌ರನ್ನು 6-3, 7-6(7/3)ಸೆಟ್‌ಗಳಿಂದ ಮಣಿಸಿದರು ಈ ಮೂಲಕ ಅಮೆರಿಕ ಪಂದ್ಯವನ್ನು 3-2 ಅಂತರದಿಂದ ಜಯ ಸಾಧಿಸಿ 18ನೆ ಬಾರಿ ಫೆಡ್ ಕಪ್ ಕಿರೀಟ ಧರಿಸಿತು. ಇದಕ್ಕೆ ಮೊದಲು ನಡೆದ ಸಿಂಗಲ್ಸ್ ಪಂದ್ಯದಲ್ಲಿ ಸಬಲೆಂಕಾರನ್ನು 7-6(7/5), 6-1 ರಿಂದ ಮಣಿಸಿದ ವಾಂಡ್‌ವೆಘ್ ಅಮೆರಿಕಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟಿದ್ದರು. ಸ್ಲೋಯಾನ್ ಸ್ಟೀಫನ್ಸ್‌ರನ್ನು 4-6, 6-1, 8-6 ಸೆಟ್‌ಗಳಿಂದ ಮಣಿಸಿದ ಸಾಸ್ನೊವಿಕ್ ಬೆಲಾರಸ್ 2-2 ರಿಂದ ಸಮಬಲ ಸಾಧಿಸಲು ನೆರವಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)