varthabharthi

ಕ್ರೀಡೆ

ನಾಕ್ಸ್‌ವೆಲ್ ಚಾಲೆಂಜರ್: ಪೇಸ್-ರಾಜಾಗೆ ಟ್ರೋಫಿ

ವಾರ್ತಾ ಭಾರತಿ : 14 Nov, 2017

ಹೊಸದಿಲ್ಲಿ, ನ.13: ಲಿಯಾಂಡರ್ ಪೇಸ್ ಹಾಗೂ ಪೂರವ್ ರಾಜಾ ನಾಕ್ಸ್‌ವೆಲ್ ಚಾಲೆಂಜರ್ ಟೂರ್ನಿಯಲ್ಲಿ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಆಗಸ್ಟ್‌ನಲ್ಲಿ ಡಬಲ್ಸ್ ಪಂದ್ಯ ಆಡಲು ಆರಂಭಿಸಿರುವ ಪೇಸ್-ರಾಜಾ ಜೋಡಿಗೆ ಇದು ಮೊದಲ ಪ್ರಶಸ್ತಿಯಾಗಿದೆ. ಪೇಸ್ ಈ ಋತುವಿನಲ್ಲಿ ನಾಲ್ಕನೆ ಚಾಲೆಂಜರ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪೇಸ್ ಹಾಗೂ ರಾಜಾ ಮೂರೂವರೆ ತಿಂಗಳಲ್ಲಿ ಯುಎಸ್ ಓಪನ್ ಸಹಿತ ಒಟ್ಟು 8 ಟೂರ್ನಮೆಂಟ್ ಆಡಿದ್ದಾರೆ. ಅಗ್ರ ಶ್ರೇಯಾಂಕದ ಭಾರತದ ಜೋಡಿ ರವಿವಾರ ರಾತ್ರಿ ನಡೆದ 75,000 ಡಾಲರ್ ಬಹುಮಾನ ಮೊತ್ತದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಅಮೆರಿಕ-ಆಸ್ಟ್ರೇಲಿಯದ ಜೋಡಿ ಜೇಮ್ಸ್ ಸೆರೆಟಾನಿ ಹಾಗೂ ಜಾನ್ ಪ್ಯಾಟ್ರಿಕ್ ಸ್ಮಿತ್‌ರನ್ನು 7-6(4),7-6(4) ಸೆಟ್‌ಗಳಿಂದ ಸೋಲಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)