varthabharthi

ಕರಾವಳಿ

ಭಟ್ಕಳದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

ಭ್ರಷ್ಟಚಾರಿ ಮತ್ತು ಅತ್ಯಾಚಾರಿಗಳ ಸಂಗಮ ರಾಜ್ಯ ಸರ್ಕಾರ: ಯಡಿಯೂರಪ್ಪ ಟೀಕೆ

ವಾರ್ತಾ ಭಾರತಿ : 14 Nov, 2017

ಭಟ್ಕಳ, ನ.14: ರಾಜ್ಯದಲ್ಲಿ ಅತ್ಯಾಚಾರಿ ಮತ್ತು ಭ್ರಷ್ಟಚಾರಿಗಳು ಕೂಡಿ ಸರ್ಕಾರ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಿದ್ದರಾಮಯ್ಯರನ್ನು ಕಿತ್ತೆಸೆದು ಬಿಜೆಪಿಗೆ ಕೈಗೆ ಅಧಿಕಾರ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಅವರು ಸೋಮವಾರ ರಾತ್ರಿ ಇಲ್ಲಿನ ಗುರುಸುಧೀಂದ್ರ ಕಾಲೇಜು ಮೃದಾನದಲ್ಲಿ ನಿರ್ಮಿಸಿದ ಡಾ.ಯು.ಚಿತ್ತರಂಜನ್ ವೇದಿಕೆಯಲ್ಲಿ ಜರಗಿದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾಂಗ್ರೆಸ್ ಪಕ್ಷ ಒಡೆದ ಮನೆಯಂತಾಗಿದ್ದು, ಪಕ್ಷದ ಮುಖಂಡರು ಪರಸ್ಪರ ಕಚ್ಚಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರನ್ನೇ ಚುನಾವಣೆಯಲ್ಲಿ ಸೋಲಿಸುವ ಷಡ್ಯಂತ್ರ ಮಾಡಿದ ಸಿದ್ದರಾಮಯ್ಯರನ್ನು ಕಾಂಗ್ರೇಸ್ಸಿಗರೆ ಕ್ಷಮಿಸಲ್ಲ ಎಂದ ಯಡಿಯೂರಪ್ಪ, ನಾವೆಲ್ಲರೂ ಒಗ್ಗಟ್ಟಾಗಿ ಭ್ರಷ್ಟ ಸಿದ್ದರಾಮಯ್ಯನವರ ಸರ್ಕಾರವನ್ನು ಕಿತ್ತೆಸೆಯುವ ಪಣವನ್ನು ತೊಡಬೇಕಾಗಿದೆ ಎದರು.

ನಮ್ಮ ಆಡಳಿತ ಎಲ್ಲರಿಗೂ ಸಮಬಾಳು ಸಮಪಾಲು ನೀಡುತ್ತಿದೆ. ಜಿಲ್ಲೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಾವು ಬಗೆಹರಿಸುತ್ತೇವೆ ಎಂದರು. 

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕುಮಾರ್ ಬಂಗಾರಪ್ಪ ಮಾತನಾಡಿದರು.

ವೇದಿಕೆಯಲ್ಲಿ ಸಂಸದರಾದ ಶ್ರೀರಾಮುಲು, ಶೋಭಾ ಕರಂದ್ಲಾಜೆ, ಮಾಜಿ ಸಚಿವ ಶಿವಾನಂದಾ ನಾಯ್ಕ, ಕೋಟಾ ಶ್ರೀನಿವಾಸ ಪೂಜಾರಿ, ಕೆ.ಜಿ.ನಾಯ್ಕ, ಜೆ.ಡಿ.ನಾಯ್ಕ, ಈಶ್ವರ್ ನಾಯ್ಕ ಭಾರತಿ ಶೆಟ್ಟಿ, ವಿಕ್ರಮಾರ್ಜುನ ಹೆಗಡೆ, ಮಾಜಿ ಸಚಿವ ಹರತಾಳ ಹಾಲಪ್ಪ ಮುಂತಾದವರು ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)