varthabharthi

ಕರ್ನಾಟಕ

ಇಂದು ಮೌಢ್ಯ, ವಾಮಾಚಾರ ಪ್ರತಿಬಂಧ-ನಿರ್ಮೂಲನೆ ವಿಧೇಯಕ ಮಂಡನೆ?

ವಾರ್ತಾ ಭಾರತಿ : 14 Nov, 2017

ಬೆಳಗಾವಿ, ನ.14: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಮೌಢ್ಯ, ವಾಮಾಚಾರ ಪ್ರತಿಬಂಧ-ನಿರ್ಮೂಲನೆ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು 201ನೆ ಸಾಲಿನ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕವನ್ನು ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

 

Comments (Click here to Expand)