varthabharthi

ಕರಾವಳಿ

ಪ್ರಸ್ತುತ ಪಾಕ್ಷಿಕದಿಂದ ಮಾಧ್ಯಮ ಕಾರ್ಯಾಗಾರ

ವಾರ್ತಾ ಭಾರತಿ : 14 Nov, 2017

ಬಂಟ್ವಾಳ, ನ.14: ಪ್ರಸ್ತುತ ಪಾಕ್ಷಿಕದ ವತಿಯಿಂದ ಉದಯೋನ್ಮುಖ ಬರಹಗಾರರಿಗಾಗಿ ಏಕದಿನ ಮಾಧ್ಯಮ ಕಾರ್ಯಾಗಾರ ಇತ್ತೀಚೆಗೆ ಪಾಣೆಮಂಗಳೂರಿನ ಅಕ್ಕರೆಂಗಡಿಯ ಮಾಹಿತಿ ಕೇಂದ್ರದ ಕಟ್ಟಡದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ‘ಇಸ್ಲಾಮ್ ಮತ್ತು ಬರಹ’ ಎಂಬ ವಿಷಯದ ಕುರಿತು ಪ್ರಸ್ತುತ ಉಪಸಂಪಾದಕ ರಝಾಕ್ ಕೆಮ್ಮಾರ ತರಗತಿ ನಡೆಸಿಕೊಟ್ಟರು. ವರದಿಗಾರಿಕೆಯ ಕುರಿತು ಪತ್ರಕರ್ತ ಇಬ್ರಾಹೀಂ ಅಡ್ಕಸ್ಥಳ ಮತ್ತು ‘ಬರೆಯುವುದು ಹೇಗೆ?’ ಎಂಬ ವಿಷಯದ ಬಗ್ಗೆ ಫಯಾಝ್ ಎನ್. ತರಗತಿ ನಡೆಸಿಕೊಟ್ಟರು.

ಕಾರ್ಯಾಗಾರದಲ್ಲಿ ವಿವಿಧ ತಾಲೂಕಿನ 36 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಪ್ರಸ್ತುತ ಪಾಕ್ಷಿಕದ ಸಂಪಾದಕ ಝಿಯಾವುಲ್ ಹಖ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ತುತಿ ಪಬ್ಲಿಕೇಷನ್ ವ್ಯವಸ್ಥಾಪಕ ರಹೀಮ್ ಉಪಸ್ಥಿತರಿದ್ದರು.

 

Comments (Click here to Expand)