varthabharthi

ಕರಾವಳಿ

ರಸ್ತೆ ಅಪಘಾತ: ಕುಕ್ಕಿಲ ದಾರಿಮಿಗೆ ಗಾಯ

ವಾರ್ತಾ ಭಾರತಿ : 14 Nov, 2017

ಬಂಟ್ವಾಳ, ನ.14: ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಉಸ್ತಾದ್‌ವೊಬ್ಬರು ಗಾಯಗೊಂಡ ಘಟನೆ ವಿಟ್ಲ ಸಮೀಪದ ವೀರಕಂಬದ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.

ಸಮಸ್ತ ಕೇರಳ ಜಂಇಯ್ಯತುಲ್ ನೇತಾರ ಹಾಗೂ ಕುಕ್ಕಿಲದ ನಿವಾಸಿ ಅಬ್ದುಲ್ ಖಾದರ್ ದಾರಿಮಿ ಯಾನೆ ಕುಕ್ಕಿಲ ದಾರಿಮಿ(42) ಗಾಯಗೊಂಡವರಾಗಿದ್ದಾರೆ.

ಕುಕ್ಕಿಲ ದಾರಿಮಿ ವಿಟ್ಲದಿಂದ ಮಂಗಳೂರು ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಿಂದ ದಾರಿಮಿಯವರ ಕಾಲಿಗೆ ತೀವ್ರ ಥರದ ಗಂಭೀರ ಗಾಯವಾಗಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

 

Comments (Click here to Expand)