varthabharthi

ಕರಾವಳಿ

ದೇಶಕ್ಕೆ ನೆಹರೂ ಕುಟುಂಬದ ಕೊಡುಗೆ ಅಪಾರ: ಹರೀಶ್ ಕುಮಾರ್

ವಾರ್ತಾ ಭಾರತಿ : 14 Nov, 2017

ಮಂಗಳೂರು, ನ.14: ದೇಶದ ಪ್ರಥಮ ಪ್ರಧಾನಿ ಜವಹಾರ್‌ಲಾಲ್ ನೆಹರೂ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ತನ್ನ ಕುಟುಂಬದ ಆಸ್ತಿ ಸಂಪತ್ತನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅಲ್ಲದೆ ಮಕ್ಕಳ ಮನಸ್ಸನ್ನು ಗೆದ್ದ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವುದು ಸ್ತುತ್ಯಾರ್ಹ ಎಂದು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ನೆಹರೂ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪಿ.ವಿ. ಮೋಹನ್, ತಾರನಾತ್ ಶೆಟ್ಟಿ, ಜಿಲ್ಲಾ ಕಾಂಗ್ರಸ್ ಉಪಾಧ್ಯಕ್ಷರಾದ ಬಲರಾಜ ರೈ, ಹರ್ಷರಾಜ್ ಮುದ್ಯ, ಪದ್ಮನಾಭ ನರಿಂಗಾನ, ಅಬೂಬಕರ್ ಕುದ್ರೊಳಿ, ಸದಾಶಿವ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಜಿ. ಅಬ್ದುಲ್ ಸಲೀಂ, ಲೋಕೇಶ್ ಹೆಗೆ,್ಡ ಮುಹಮ್ಮದ್ ಮೋನು, ಯು.ಬಿ. ಸಲೀಂ ಉಳ್ಳಾಲ್, ಕಾಪೋರೇಟರ್‌ರಾದ ಜಸಿಂತ ಅಲ್ಫ್ರೇಡಾ, ಡಿ.ಕೆ. ಅಶೋಕ್, ಲ್ಯಾನ್ಸಿ ಲಾಟ್ ಪಿಂಟೋ, ಟಿ.ಕೆ.ಶೈಲಜಾ, ಆಶಾ ಡಿಸಿಲ್ವಾ, ದಿನೇಶ್, ಪಿ.ಎಸ್. ಶಾಹುಲ್ ಹಮೀದ್, ನಮಿರಾ ರಾವ್, ಶಕುಂತಲ ಕಾಮತ್, ಆರಿಫ್, ಬಾವ, ಚೇತನ್ ಬೆಂಗರೆ, ಅಬ್ದುಲ್ ಉಯಾಝ್ ಬಾಷಾ, ಶಬ್ಬೀರ್ ಸಿದ್ದಕಟ್ಟೆ, ಮೋಹನ್ ಮೆಂಡನ್, ಸುರೇಶ್ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸಂತೋಷ ಶೆಟ್ಟಿ ಸ್ವಾಗತಿಸಿದರು. ಸೇವಾದಲದ ಎಚ್.ಎಂ. ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವಾಸ್ ಕುಮಾರ ದಾಸ್ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)