varthabharthi

ಕರಾವಳಿ

ನ.16: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಪ್ರವಾಸ

ವಾರ್ತಾ ಭಾರತಿ : 14 Nov, 2017

ಮಂಗಳೂರು, ನ.14: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ನ.16ರಂದು ಬೆಳಗ್ಗೆ 8.15 ಕ್ಕೆ ಸರ್ಕ್ಯೂಟ್ ಹೌಸ್‌ನಿಂದ ರಸ್ತೆ ಮೂಲಕ ಸುಳ್ಯಕ್ಕೆ ತೆರಳುವರು.

ಬೆಳಗ್ಗೆ 9:45ಕ್ಕೆ ಸುಳ್ಯದ ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದ.ಕ ಜಿಲ್ಲಾ ಮತ್ತು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಭಾಗಿತ್ವದಲ್ಲಿ ಏರ್ಪಡಿಸಿರುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರಿಗೆ ವೃತ್ತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.

ಸಂಜೆ 6 ಗಂಟೆಗೆ ಸುಳ್ಯದಿಂದ ರಸ್ತೆ ಮೂಲಕ ಮಂಗಳೂರಿಗೆ ಆಗಮಿಸಿ ರಾತ್ರಿ 9:30ಕ್ಕೆ ರಸ್ತೆ ಮೂಲಕ ಬೆಳಗಾವಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.

 

Comments (Click here to Expand)