varthabharthi

ಕರ್ನಾಟಕ

ನ.19 ರಂದು 'ಕನ್ನಡ ನಿನ್ನೆ, ಇಂದು-ನಾಳೆ' ಕುರಿತು ವಿಚಾರ ಸಂಕಿರಣ

ವಾರ್ತಾ ಭಾರತಿ : 14 Nov, 2017

ಬೆಂಗಳೂರು, ನ.14: ಕನ್ನಡ ಭಾಷೆಯ ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಕುರಿತ ‘ಕನ್ನಡ ನಿನ್ನೆ, ಇಂದು ಮತ್ತು ನಾಳೆ’ ವಿಷಯ ಕುರಿತು ನ.19 ರಂದು ನಗರದ

ಕಸಾಪದಲ್ಲಿ ಇಜ್ಞಾನ ಟ್ರಸ್ಟ್ ಮತ್ತು ನವ ಕರ್ನಾಟಕ ಪ್ರಕಾಶನದಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ವಿಚಾರ ಸಂಕಿರಣದಲ್ಲಿ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ, ಲೇಖಕ ಎಸ್. ದಿವಾಕರ್ ಹಾಗೂ ವಸುಧೇಂದ್ರ ಕನ್ನಡ ನಿನ್ನೆ, ಇಂದು ಹಾಗೂ ನಾಳೆಗಳ ಕುರಿತು ತಮ್ಮ ವಿಚಾರ ಮಂಡಿಸಲಿದ್ದಾರೆ. ಇವರೊಂದಿಗೆ ಚಿಂತಾಮಣಿ ಕೊಡ್ಲೆಕೆರೆ, ಜಿ.ಎಂ. ಕೃಷ್ಣಮೂರ್ತಿ ಹಾಗೂ ಮಂಜುನಾಥ ಕೊಳ್ಳೇಗಾಲ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆಯಲ್ಲಿ ನವಕರ್ನಾಟಕ ಪ್ರಕಾಶನದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲಿಕೆಯ 18 ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಪುಸ್ತಕಗಳನ್ನು ರಾಜ್ಯದ 150 ಕ್ಕೂ ಅಧಿಕ ಶಾಲೆಗಳಿಗೆ ಉಚಿತವಾಗಿ ಇಜ್ಞಾನ ಟ್ರಸ್ಟ್‌ನ ‘ಕಲಿಕೆಗೆ ಕೊಡುಗೆ’ ಕಾರ್ಯಕ್ರಮದ ಅಡಿಯಲ್ಲಿ ವಿತರಣೆಯ ಹಾಗೂ ಟ್ರಸ್ಟ್‌ನ ಜಾಲತಾಣ ಉದ್ಘಾಟನೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

 

Comments (Click here to Expand)