varthabharthi

ಕರಾವಳಿ

ಉಡುಪಿ: ಐವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ವಾರ್ತಾ ಭಾರತಿ : 14 Nov, 2017

ಉಡುಪಿ, ನ.14: ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ ಕಲ್ಯಾಣಪುರದ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 ಉಡುಪಿ ಜಿಲ್ಲೆ ಪ್ರತಿನಿಧಿಸಿದ ಈ ಸಂಸ್ಥೆಯ ವಿದ್ಯಾರ್ಥಿಗಳು 3 ಚಿನ್ನ, 3 ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಕೂಟದ ಒಟ್ಟು 6 ನೂತನ ದಾಖಲೆಗಳಲ್ಲಿ 4x100 ಮೀಟರ್ ರೀಲೆಯಲ್ಲಿ 43.20 ಸೆಕೆಂಡ್‌ಗಳೊಂದಿಗೆ ನೂತನ ದಾಖಲೆ ನಿರ್ಮಿಸಿರುವ ಉಡುಪಿ ಬಾಲಕರ ತಂಡದಲ್ಲಿ ಕಲ್ಯಾಣಪುರ ಕಾಲೇಜಿನ ವರುಣ್ ಅಡಿಗ, ಅಬಿನ್ ದೇವಾಡಿಗ, ಮುಹಮ್ಮದ್ ಅತೀಫ್ ಕೂಡ ಇದ್ದರು.

200 ಮೀ. ಓಟದಲ್ಲಿ ವರುಣ್ ಅಡಿಗ ಚಿನ್ನ, ಅಬಿನ್ ದೇವಾಡಿಗ ಬೆಳ್ಳಿ, 100 ಮೀ. ಓಟದಲ್ಲಿ ವರುಣ್ ಅಡಿಗ ಬೆಳ್ಳಿ, ಉದ್ದ ಜಿಗಿತದಲ್ಲಿ ಸನ್ನಿ ಅ್ಯಂಟನಿ ಡಿಸೋಜ ಚಿನ್ನ, ಇವರೊಂದಿಗೆ ಮರ್ವಿನ್ ರೊಡ್ರಿಗಸ್ ಮತ್ತು ಧನುಷ್ ಮೀಸಲು ಓಟಗಾರರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉತ್ತಮ ಸಾಧನೆ ಗೈದಿರುವ ಈ ಕ್ರೀಡಾಪಟುಗಳಿಗೆ ಕಾಲೇಜಿನ ಸಂಚಾಲಕ ಅ.ವಂ. ಸ್ಟ್ಯಾನಿ ಬಿ. ಲೋಬೋ, ಪ್ರಾಂಶುಪಾಲೆ ಸವಿತಾ ಕುಮಾರಿ, ಕ್ರೀಡಾ ತರಬೇತಿದಾರರಾದ ವಾಣಿಶ್ರೀ, ವಿನಯ ಶೇಟ್, ಸ್ಟೀವನ್ ಪಿಂಟೊ, ನಿಖಿಲ್, ಡಾಲ್ವಿನ್ ಡಾಯಸ್ ಶುಭ ಹಾರೈಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)