varthabharthi

ಕರಾವಳಿ

ಅನೈತಿಕ ಚಟುವಟಿಕೆ ಆರೋಪ: ಮೂವರ ಸೆರೆ

ವಾರ್ತಾ ಭಾರತಿ : 14 Nov, 2017

ಮಂಗಳೂರು,ನ.14: ನಗರದ ಪಡೀಲ್‌ನ ವಸತಿಗೃಹವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ದಲ್ಲಾಳಿ ಹಾಗೂ ಇಬ್ಬರು ಗ್ರಾಹಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಡ್ಯಾರ್ ಪದವು ನಿವಾಸಿ ಅಬ್ದುಲ್ ನಾಸೀರ್ ಯಾನೆ ಶಾನ್ (36), ಗೋಳಿಪಡ್ಪುನಿವಾಸಿ ಇಸ್ಮಾಯೀಲ್ ಯಾನೆ ಅಝ್ಮಾಲ್ (36), ಬೆಂಗಳೂರು ನಿವಾಸಿ ಸಮೀರ್ ಬಾಷಾ ಯಾನೆ ಬಾಷಾ (28) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಅಳಪೆ ಗ್ರಾಮದ ಪಡೀಲ್‌ನಲ್ಲಿರುವ ವಸತಿಗೃಹವೊಂದರಲ್ಲಿ ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದರು. ಆರೋಪಿಗಳಿಂದ 21,750 ರೂ. 5 ಮೊಬೈಲ್ ಸಹಿತ 36,750 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಅಬ್ದುಲ್ ನಾಸೀರ್ ಎಂಬಾತನು ವಸತಿಗೃಹದ ಮನೆಯನ್ನು ಬಾಡಿಗೆಗೆ ಪಡೆದು ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದನು ಎನ್ನಲಾಗಿದೆ. ದಾಳಿಯ ವೇಳೆ ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

 

Comments (Click here to Expand)