varthabharthi

ಕರಾವಳಿ

ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ವಾರ್ತಾ ಭಾರತಿ : 14 Nov, 2017

ಕಾರ್ಕಳ, ನ.14: ಬಾವಿಯ ದಂಡೆಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ  ಕಾರ್ಕಳ ರಂಗನಪಲ್ಕೆ ಎಂಬಲ್ಲಿ ನಡೆದಿದೆ.

ಮೃತರನ್ನು ರಂಗನಪಲ್ಕೆಯ ಜನಾರ್ದನ ಆಚಾರ್ಯ ಎಂದು ಗುರುತಿಸ ಲಾಗಿದೆ. ಕೆಲಸ ಮುಗಿಸಿ ಮದ್ಯ ಸೇವಿಸಿ ಮನೆಗೆ ಬಂದ ಜನಾರ್ದನ ಆಚಾರ್ಯ ಮನೆಯ ಬಾವಿಯ ದಂಡೆಯ ಮೇಲೆ ಕುಳಿತು ನಾಯಿ ಜೊತೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ  ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments (Click here to Expand)