varthabharthi

ಕರ್ನಾಟಕ

ನ.19: ಕಡೂರಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ

ವಾರ್ತಾ ಭಾರತಿ : 14 Nov, 2017

ಚಿಕ್ಕಮಗಳೂರು, ನ.14: ಕಡೂರು ತಾಪಂ ಸಭಾಂಗಣದಲ್ಲಿ ನ.19ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಸೂರಿ ಸೃಸ್ಟಿಯ ಬರಹ ಲೋಕ ವಾಟ್ಸ್‌ಆ್ಯಪ್ ಬಳಗ ನಿರ್ವಾಹಕ ಪೃಥ್ವಿ ಸೂರಿ ತಿಳಿಸಿದ್ದಾರೆ.

ಅವರು ಮಂಗಳವಾರ ಈ ಕುರಿತು ಹೇಳಿಕೆ ನೀಡಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ, ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಆಶಯ ನುಡಿಯನ್ನು ಸಾಹಿತಿ ಡಾ.ಆಗುಂಬೆ ಗಣೇಶ್ ಹೆಗಡೆ ನೆರವೇರಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಹುಲ್ಲಳ್ಳಿ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಪತ್ರಕರ್ತ ಅರಗ ರವಿ, ಚಿಂತಕ ಕೆ.ಎಸ್. ಶರತ್ ಕೃಷ್ಣಮೂರ್ತಿ, ಮೈತ್ರಿ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಸ್ಥಾಪಕ ಶಿವಪ್ರಸಾದ್ ಅಜ್ಜಂಪುರ ಹಾಗೂ ಚಿಂತಕ ಎಚ್.ಹರೀಶ್ ಭಾಗವಹಿಸಲಿದ್ದಾರೆ.

ಕವಿಗೋಷ್ಠಿಗೆ ರಾಜ್ಯದ ಹಿರಿಯ-ಕಿರಿಯ ಸೂರಿ ಸೃಷ್ಟಿಯ ಬರಹಲೋಕ ವಾಟ್ಸ್‌ಆ್ಯಪ್ ಬಳಗದ 60 ಕವಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 

Comments (Click here to Expand)