varthabharthi

ರಾಷ್ಟ್ರೀಯ

ಮಾನವ ಗುರಾಣಿ ಸಂತ್ರಸ್ತನಿಗೆ ಪರಿಹಾರ ನಿರಾಕರಣೆ: ಮನವಿ ವಿಚಾರಣೆಗೆ ಎಸ್‌ಎಚ್‌ಆರ್‌ಸಿ ನಿರ್ಧಾರ

ವಾರ್ತಾ ಭಾರತಿ : 14 Nov, 2017

ಹೊಸದಿಲ್ಲಿ, ನ. 14: ಸೇನಾಧಿಕಾರಿಗಳಿಂದ ಮಾನವ ಗುರಾಣಿಯಾಗಿ ಬಳಕೆಯಾಗಿದ್ದ ಫಾರೂಕ್ ಅಹ್ಮದ್ ದಾರ್‌ಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಜಮ್ಮು ಹಾಗೂ ಕಾಶ್ಮೀರ ರಾಜ್ಯ ಮಾನವ ಹಕ್ಕು ಆಯೋಗ ನೀಡಿದ ಆದೇಶವನ್ನು ರಾಜ್ಯ ಸರಕಾರ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಸಲ್ಲಿಸಲಾಗಿರುವ ಮನವಿಯನ್ನು ಎಸ್‌ಎಚ್‌ಆರ್‌ಸಿ ಮುಂದಿನ ತಿಂಗಳು ವಿಚಾರಣೆ ನಡೆಸಲಿದೆ.

ಆಯೋಗದ ಈ ಹಿಂದಿನ ಶಿಫಾರಸಿನಂತೆ ಕಾರ್ಯಪ್ರವೃತ್ತವಾಗದ ಸರಕಾರದ ವಿರುದ್ಧ ದಾರ್ ಸಲ್ಲಿಸಿದ ಮನವಿಯನ್ನು ಎಸ್‌ಎಚ್‌ಆರ್‌ಸಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಬಿಲಾಲ್ ನಾಝ್ಕಿ ವಿಚಾರಣೆ ನಡೆಸಿದರು.

 ಆಯೋಗದ ವಿಭಾಗೀಯ ಪೀಠದಲ್ಲಿ ಡಿಸೆಂಬರ್ 12ರಂದು ಪ್ರಕರಣದ ಕುರಿತು ಅಂತಿಮ ವಿಚಾರಣೆ ನಡೆಸಲು ನ್ಯಾಯಮೂರ್ತಿ ನಾಝ್ಕಿ ಪರಿಗಣಿಸಿದರು ಹಾಗೂ ಆ ದಿನಾಂಕದ ಒಳಗೆ ಸ್ಪಷ್ಟ ನಿಲುವು ಹೊಂದುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)