varthabharthi

ಕರ್ನಾಟಕ

ವಿದ್ಯಾರ್ಥಿಗಳು ಆಟೋಟದ ಜತೆಗೆ ಕಲಿಕೆಗೆ ಹೆಚ್ಚಿನ ಹೊತ್ತು ನೀಡಬೇಕು: ರಾಜೇಶ್

ವಾರ್ತಾ ಭಾರತಿ : 14 Nov, 2017

ಹನೂರು, ನ.14: ಗೆಜ್ಜಲನತ್ತ ಹಾಗೂ ಮುತ್ತು ಶೆಟ್ಟಿಯೂರು ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಅಂಗವಾಗಿ  ಜೈ ಭೀಮ್ ಯುವಜನ ಕಲಾ ಸಂಘದ ವತಿಯಿಂದ ಸಿಹಿ ಹಂಚಲಾಯಿತು.

ಈ ವೇಳೆ ಪೊನ್ನಾಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಅತ್ತ್ಯುನ್ನತ ಸ್ಥಾನಕ್ಕೆ ಬೆಳೆದು ದೇಶವನ್ನಾಳುವ ಮಹಾನ್ ವ್ಯಕ್ತಿಗಳಾಗಿದ್ದಾರೆಯೇ ಹೊರತು, ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳು ಆ ಸ್ಥಾನಕ್ಕೇರಿದ ನಿದರ್ಶನಗಳು ಕಡಿಮೆ. ಆದ್ದರಿಂದ ತಾವೆಲ್ಲರೂ ಆಟೋಟದ ಜತೆಗೆ ಕಲಿಕೆಗೆ ಹೆಚ್ಚಿನ ಹೊತ್ತು ನೀಡಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು ಹೆತ್ತ ತಂದೆ ತಾಯಂದಿರಿಗೆ ಹಾಗೂ ದೇಶಕ್ಕೆ ಹೆಸರನ್ನು ತಂದುಕೊಡಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ವೇಳೆ ಜೈ ಭೀಮ್ ಯುವಜನ ಕಲಾ ಸಂಘದ ಅಧ್ಯಕ್ಷ ಸುಂದರೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾಜಣ್ಣ, ಎಸ್‍ಸಿ., ಎಸ್.ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಲಿಂಗು, ಪಳನಿಮೇಡು ಅಂಬೇಡ್ಕರ್ ಸಂಘದ ಅಧ್ಯಕ್ಷ ವಿ.ಟಿ.ಕಾರ್ತಿಕ್ ಕುಮಾರ್, ದಲಿತ ಮುಖಂಡ ರಘುನಂದ, ಗ್ರಾಮಪಂಚಾಯತ್ ಸದಸ್ಯ ವೀರಭದ್ರ, ಅಂಗನವಾಡಿ ಕಾರ್ಯಕರ್ತೆ ಚಿಕ್ಕತಾಯಮ್ಮ, ಜಾನಕಿ ಇನ್ನಿತರರು ಹಾಜರಿದ್ದರು. 

 

Comments (Click here to Expand)