varthabharthi

ಕ್ರೀಡೆ

ಸ್ಟಾರ್ ಆಟಗಾರ ಇಬ್ರಾಹಿಮೊವಿಕ್ ಸ್ವೀಡನ್ ತಂಡಕ್ಕೆ ವಾಪಾಸ್?

ವಾರ್ತಾ ಭಾರತಿ : 14 Nov, 2017

ಸ್ಟಾಕ್‌ಹೊಮ್,ನ.14: ಸ್ವೀಡನ್ ತಂಡ 2018ರ ವಿಶ್ವಕಪ್‌ಗೆ ಅರ್ಹತೆ ಪಡೆದ ಬೆನ್ನಿಗೇ ತಂಡದ ಮಾಜಿ ಸ್ಟಾರ್ ಆಟಗಾರ ಝ್ಲಾಟನ್ ಇಬ್ರಾಹಿಮೊವಿಕ್ ನಿವೃತ್ತಿ ನಿರ್ಧಾರ ಹಿಂಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ. ಇಟಲಿ ವಿರುದ್ಧ ಮೊದಲ ಪ್ಲೇ-ಆಫ್ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿದ್ದ ಹಿನ್ನೆಲೆಯಲ್ಲಿ ಸ್ವೀಡನ್ ವಿಶ್ವಕಪ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದೆ. ‘‘ಇಬ್ರಾಹಿಮೊವಿಕ್ ಒಂದೂವರೆ ವರ್ಷದ ಹಿಂದೆ ನಿವೃತ್ತಿಯಾಗಿದ್ದರೂ ಅಭಿಮಾನಿಗಳು ಅವರ ಬಗ್ಗೆ ಈಗಲೂ ಮಾತನಾಡುತ್ತಿದ್ದಾರೆ. ಅವರು ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಅದ್ಭುತ ಅಥ್ಲೀಟ್’ ಎಂದು ಇಬ್ರಾಹಿಮೊವಿಕ್ ಸ್ವೀಡನ್ ತಂಡಕ್ಕೆ ವಾಪಸಾಗಲಿದ್ದಾರೆ ಎಂಬ ವರದಿಯ ಬಗ್ಗೆ ಸ್ವೀಡನ್ ಕೋಚ್ ಆ್ಯಂಡರ್ಸನ್ ಪ್ರತಿಕ್ರಿಯಿಸಿದರು. 2016ರ ಯುರೋ ಕಪ್‌ನಲ್ಲಿ ಸ್ವೀಡನ್ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದ ಬೇಸರದಲ್ಲಿ 36ರ ಹರೆಯದ ಇಬ್ರಾಹಿಮೊವಿಕ್ ನಿವೃತ್ತಿ ಘೋಷಿಸಿದ್ದರು. ಸ್ವೀಡನ್ ಪರ 116 ಪಂದ್ಯಗಳನ್ನು ಆಡಿದ್ದ ಅವರು 62 ಗೋಲುಗಳನ್ನು ಬಾರಿಸಿದ್ದರು.

 

Comments (Click here to Expand)