varthabharthi

ಕರ್ನಾಟಕ

ರಂಗೋಲಿ ಇಡುತ್ತಿದ್ದ ವೇಳೆ ಮಾಂಗಲ್ಯ ಸರ ಎಗರಿಸಿದ ಕಳ್ಳರು

ವಾರ್ತಾ ಭಾರತಿ : 15 Nov, 2017

ಆನೇಕಲ್, ನ.15: ಬೆಳ್ಳಂಬೆಳಗ್ಗೆ ಕಳ್ಳರು ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಎಗರಿಸಿ ಪರಾರಿಯಾದ ಘಟನೆ ಆನೇಕಲ್ ವೀವರ್ಸ್ ಕಾಲನಿಯ ಮುಖ್ಯರಸ್ತೆಯಲ್ಲಿಂದು ಇಂದು ನಡೆದಿದೆ.

ಇಲ್ಲಿನ ಕಾಂತಮ್ಮ ಎಂಬವರೇ ಸರ ಕಳೆದುಕೊಂಡವರು. ಕಾಂತಮ್ಮ ಇಂದು ಮುಂಜಾನೆ ಮನೆಯಂಗಳದಲ್ಲಿ ರಂಗೋಲಿ ಇಡುತ್ತಿದ್ದ ವೇಳೆ ಮಂಕಿ ಕ್ಯಾಪ್ ಧರಿಸಿ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕಾಂತಮ್ಮರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ ದುಷ್ಕರ್ಮಿಗಳು ಅವರ ಕುತ್ತಿಗೆಯಲ್ಲಿದ್ದ 50 ಗ್ರಾಂ ವೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments (Click here to Expand)