ಕಾಬೂಲ್: ಹೊಟೇಲ್ನಲ್ಲಿ ಸ್ಫೋಟ; 9 ಸಾವು
ಕಾಬೂಲ್, ನ. 16: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ಗುರುವಾರ ನಡೆದ ರಾಜಕೀಯ ನಾಯಕರೊಬ್ಬರ ಸಭೆಯಲ್ಲಿ ಆತ್ಮಹತ್ಯಾ ಬಾಂಬರ್ ಓರ್ವ ತನ್ನನ್ನು ತಾನು ಸ್ಫೋಟಿಸಿಕೊಂಡಾಗ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ತನ್ನ ಅಧಿಕೃತ ಸುದ್ದಿ ಸಂಸ್ಥೆ ಅಮಕ್ ಮೂಲಕ ವಹಿಸಿಕೊಂಡಿದೆ.
ಸಭೆ ನಡೆಯುತ್ತಿದ್ದ ಕಾಬೂಲ್ನ ಖೈರ್ ಖಾನ ಜಿಲ್ಲೆಯ ಹೊಟೇಲೊಂದರ ಸಮೀಪ ನಡೆದುಕೊಂಡು ಬಂದ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡನು ಎಂದು ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ಹೇಳಿದರು.
ಮೃತರಲ್ಲಿ ಏಳು ಪೊಲೀಸರು ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ.
Next Story