ಶೂಟಿಂಗ್ ಟ್ರ್ಯಾಪ್ನಲ್ಲಿ ಶಾಗುನ್ ಚೌಧರಿ ರಾಷ್ಟ್ರೀಯ ಚಾಂಪಿಯನ್
ಒಲಿಂಪಿಕ್ಸ್ಗೆ ತೇರ್ಗಡೆ
ಹೊಸದಿಲ್ಲಿ, ನ.16: ಭಾರತದ ಶಾಗುನ್ ಚೌಧರಿ 61ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನ ಟ್ರಾಪ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಒಎನ್ಜಿಸಿ ಪರ ಸ್ಪರ್ಧಿಸಿರುವ ಚೌಧರಿ ಪಂಜಾಬ್ನ ರಾಜೇಶ್ವರಿ ಕುಮಾರಿ ಅವರನ್ನು 41-38 ಅಂತರದಲ್ಲಿ ಹಿಂದಿಕ್ಕಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ಗೆ ತೇರ್ಗಡೆಯಾದ ಮೊದಲ ಮಹಿಳಾ ಶೂಟರ್ ಎನಿಸಿಕೊಂಡರು.
ಹಾಲಿ ಚಾಂಪಿಯನ್ ಬಿಹಾರದ ಶ್ರೇಯಸಿ ಸಿಂಗ್ ಅವರು 29 ಅಂಕಗಳೊಂದಿಗೆ ಮೂರನೆ ಸ್ಥಾನ ಪಡೆದರು.
ಶ್ರೇಯಸಿ ಸಿಂಗ್ ಅವರು ಅರ್ಹತಾ ಸುತ್ತಿನಲ್ಲಿ 72 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿದ್ದರು. ಚೌಧರಿ 67 ಅಂಕಗಳೊಂದಿಗೆ ಮೂರನೆ ಮತ್ತು ರಾಕೇಶ್ವರಿ 62 ಅಂಕಗಳೊಂದಿಗೆ ನಾಲ್ಕನೆ ಸ್ಥಾನದೊಂದಿಗೆ ಫೈನಲ್ಗೆ ತೇರ್ಗಡೆಯಾದರು. ಒಟ್ಟು 6 ಮಂದಿ ಫೈನಲ್ ಸ್ಪರ್ಧಾ ಕಣದಲ್ಲಿದ್ದರು.
Next Story