ಟೋಲ್ ಶುಲ್ಕ ಕೇಳಿದ್ದಕ್ಕೆ ಬಿಜೆಪಿ ಕಾರ್ಯಕರ್ತರಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ: ಆರೋಪ
ಗುರ್ಗಾಂವ್, ನ.19: ಟೋಲ್ ಬೂತ್ ನಿಂದ ವಾಹನ ಹೊರಹೋಗುವುದಕ್ಕೆ ಶುಲ್ಕ ಕೇಳಿದ ಟೂಲ್ ಬೂತ್ ನ ಮಹಿಳಾ ಸಿಬ್ಬಂದಿಗೆ ಬಿಜೆಪಿ ಕಾರ್ಯಕರ್ತರು ಕಿರುಕುಳ ನೀಡಿದ ಘಟನೆ ಗುರ್ಗಾಂವ್ ನ ಖೇರ್ಕಿ ದೌಲಾ ಪ್ಲಾಝಾದಲ್ಲಿ ನಡೆದಿದೆ.
ನಾವು ಬಿಜೆಪಿ ಕಾರ್ಯಕರ್ತರಾಗಿದ್ದು, ವಾಹನ ಹೊರಹೋಗಲು ಬಿಡಬೇಕು ಎಂದು ಮಹಿಳಾ ಸಿಬ್ಬಂದಿಯಲ್ಲಿ ಕೆಲವರು ಹೇಳಿದರು. ಆದರೆ ಮಹಿಳೆ ಶುಲ್ಕ ಪಾವತಿಸದೆ ವಾಹನಗಳನ್ನು ಬಿಡಲು ನಿರಾಕರಿಸಿದ್ದಾರೆ. ಈ ಸಂದರ್ಭ ಕಾರನ್ನು ನಿಲ್ಲಿಸಿದ ಕೆಲ ಕಾರ್ಯಕರ್ತರು ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂದು ಈ ಟೋಲ್ ಪ್ಲಾಝಾದ ಪಿಆರ್ ಒ ಕ್ರಿಪಾಲ್ ಸಿಂಗ್ ಆರೋಪಿಸಿದ್ದಾರೆ.
ಟೋಲ್ ಪ್ಲಾಝಾದ ಕ್ಯಾಬಿನ್ ಗಳನ್ನು ಕೂಡ ಬಿಜೆಪಿ ಕಾರ್ಯಕರ್ತರು ನಾಶಗೈದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಇಡೀ ಘಟನೆಯ ದೃಶ್ಯಾವಳಿ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಲಾಗುವುದು” ಎಂದು ಪೊಲೀಸ್ ಅಧಿಕಾರಿ ರವೀಂದರ್ ಕುಮಾರ್ ಹೇಳಿದ್ದಾರೆ.
Next Story