varthabharthi

ನಿಧನ

ಟಿ.ಪಿ.ಗೋಪಾಲ್

ವಾರ್ತಾ ಭಾರತಿ : 19 Nov, 2017

ಬಣಕಲ್, ನ.19:ಕೊಟ್ಟಿಗೆಹಾರದ ತರುವೆ ಗ್ರಾಮದ ನಿವಾಸಿ ಟಿ.ಪಿ.ಗೋಪಾಲ್(50) ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ರಾತ್ರಿ ಅವರು ವಾಸ್ತವ್ಯ ಹೂಡಿದ್ದ ಮೂಡಿಗೆರೆಯ ಬಿಎಸ್‍ಎನ್‍ಎಲ್ ವಸತಿಗೃಹದಲ್ಲಿ ನಿಧನರಾಗಿದ್ದಾರೆ.

ಉದ್ಯೋಗಿ ಟಿ.ಪಿ.ಗೋಪಾಲ್ ದೂರವಾಣಿ ಇಲಾಖೆಯ ಟೆಲಿಪೋನ್ ಮೆಕ್ಯಾನಿಕ್ ಹುದ್ದೆಯಲ್ಲಿ ಕಚ್ಚಿಗೆ, ಸುಂಕಸಾಲೆ, ಮೂಡಿಗೆರೆ ಹ್ಯಾಂಡ್‍ಪೋಸ್ಟ್, ಗುತ್ತಿ, ನಿಡುವಾಳೆ ದೂರವಾಣಿ ವಿನಿಮಯ ಕೇಂದ್ರದಲ್ಲಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೂಡಿಗೆರೆ ವಸತಿಗೃಹದಲ್ಲಿ ಶನಿವಾರ ರಾತ್ರಿ ಕೊನೆಯುಸಿರೆಳೆದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಕುಟುಂಬವರ್ಗದವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಭಾನುವಾರ ತರುವೆ ಗ್ರಾಮದ ರುದ್ರಭೂಮಿಯಲ್ಲಿ ನಡೆಯಿತು.

 

Comments (Click here to Expand)