ಎಟಿಎಂಅನ್ನೇ ಕದ್ದೊಯ್ದ ಕಳ್ಳರು !
ಶೀನಗರ, ನ. 20: ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿರುವ ಜಿಲ್ಲಾಸ್ಪತ್ರೆಯ ಆವರಣದಲ್ಲಿದ್ದ ಎಟಿಎಂಅನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಪಿಯಾನ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಮ್ಮು ಹಾಗೂ ಕಾಶ್ಮೀರ ಬ್ಯಾಂಕ್ ಸ್ಥಾಪಿಸಿದ್ದ ಎಟಿಎಂ ಅನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕದ್ದೊಯ್ಯಲಾದ ಎಟಿಎಂನಲ್ಲಿ ಖಚಿತವಾಗಿ ಎಷ್ಟು ಹಣವಿತ್ತು ಎಂಬುದನ್ನು ಅಂದಾಜಿಸುವ ಪ್ರಕ್ರಿಯೆ ಯಲ್ಲಿ ಬ್ಯಾಂಕ್ ಅಧಿಕಾರಿಗಳು ತೊಡಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Next Story