ತಮಿಳಿನಲ್ಲಿ ಸಾಯಿಪಲ್ಲವಿ ಆರಂಗೇಟ್ರಂ
‘ಪ್ರೇಮಂ’ ಖ್ಯಾತಿಯ ಸಾಯಿಪಲ್ಲವಿ ಅಭಿನಯದ ಚೊಚ್ಚಲ ತಮಿಳು ಚಿತ್ರ ‘ಕರು’ವಿನ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿಗಳನ್ನು ಮೋಡಿಮಾಡಿದೆ. ಎ.ಎಲ್.ವಿಜಯ್ ನಿರ್ದೇಶನದ ‘ಕರು’ ಒಂದು ಪಕ್ಕಾ ಹಾರರ್ ಚಿತ್ರವಾಗಿದೆ. ನಾಯಕಿ ಪ್ರಧಾನವಾದ ಈ ಚಿತ್ರದ ಬಿಡುಗಡೆಯನ್ನೇ ಚಿತ್ರಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ತಮಿಳಿನ ಜೊತೆಗೆ ತೆಲುಗಿನಲ್ಲೂ ಚಿತ್ರ ರಿಲೀಸ್ ಆಗಲಿದೆ. ಮಲಯಾಳಂ ಚಿತ್ರ ‘ಪ್ರೇಮಂ’ನಲ್ಲಿ ಮಿಸ್ ಮಲರ್ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದ ಸಾಯಿಪಲ್ಲವಿ, ಈಗ ತೆಲುಗಿನಲ್ಲೂ ಜನಪಿಯ ನಟಿ. ಆಕೆ ಅಭಿನಯಿಸಿದ ತೆಲುಗು ಚಿತ್ರ ‘ಫಿದಾ’ ಭಾರೀ ಹಿಟ್ ಆಗಿದೆ. ಇದೀಗ ಸಾಯಿಪಲ್ಲವಿ ‘ಕರು’ ಮೂಲಕ ತಮಿಳಿನಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
‘ಪ್ರೇಮಂ’ ಹಾಗೂ ‘ಫಿದಾ’ ರೋಮ್ಯಾಂಟಿಕ್ ಹಿನ್ನೆಲೆಯುಳ್ಳ ಚಿತ್ರಗಳಲ್ಲಿ ತನ್ನ ಅದ್ಭುತ ಅಭಿನಯದಿಂದ ಪ್ರೇಕ್ಷಕರ ಮನಗೆದ್ದ ಸಾಯಿಪಲ್ಲವಿ, ಹಾರರ್ ಚಿತ್ರದಲ್ಲೂ ಸೈ ಎನಿಸಿಕೊಳ್ಳುವರೇ ಎಂಬುದನ್ನು ಕಾದುನೋಡಬೇಕಿದೆ.
Next Story