ದೀಪಿಕಾಗೆ 2 ಕೋಟಿ ಫಾಲೋವರ್ಸ್
‘ಪದ್ಮಾವತಿ’ ಚಿತ್ರ ವಿವಾದದ ದಾವಾನಲಕ್ಕೆ ಸಿಲುಕಿರುವಂತೆಯೇ, ಚಿತ್ರದ ನಾಯಕಿ ದೀಪಿಕಾ ಹೊಸ ದಾಖಲೆ ಸ್ಥಾಪಿಸಿದ್ದಾರೆ. ಆಕೆಯ ಇನ್ಸ್ಟಾಗ್ರಾಮ್ನ ಫಾಲೋವರ್ಗಳ ಸಂಖ್ಯೆ ಈಗ 2 ಕೋಟಿಯನ್ನು ದಾಟಿದೆ. ಇಷ್ಟೊಂದು ದಾಖಲೆ ಸಂಖ್ಯೆಯ ಫಾಲೋವರ್ಗಳನ್ನು ಪಡೆದಿದ್ದುದಕ್ಕಾಗಿ ಆಕೆಗೆ ಇನ್ಸ್ಟಾಗ್ರಾಂ ಪ್ರಶಸ್ತಿ ದೊರೆತಿದೆ. ಇನ್ಸ್ಟಾಗ್ರಾಮ್ನಲ್ಲಿ ಅತ್ಯಧಿಕ ಫಾಲೋವರ್ಗಳನ್ನು ಹೊಂದಿರುವ ಏಶ್ಯನ್ ಮಹಿಳೆಯೆಂಬ ಪ್ರಶಸ್ತಿ ಆಕೆಗೆ ಸಂದಿದೆ. ಈ ಪ್ರಶಸ್ತಿಯನ್ನು ಸಂತಸದಿಂದ ಹಿಡಿದುಕೊಂಡಿರುವ ಫೋಟೊವೊಂದನ್ನು ಪೋಸ್ಟ್ ಮಾಡುವ ಮೂಲಕ ದೀಪಿಕಾ ತನ್ನ ಈ ಅಭೂತಪೂರ್ವ ಸಾಧನೆಯ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾಳೆ. ಬಾಲಿವುಡ್ ಪ್ರವೇಶಿಸಿದಾಗಿನಿಂದ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿರುವ ದೀಪಿಕಾ, ‘ಚೆನ್ನೈ ಎಕ್ಸ್ಪ್ರೆಸ್’, ‘ಬಾಜಿರಾವ್ ಮಸ್ತಾನಿ’ಯಂತಹ ಸೂಪರ್ಹಿಟ್ ಚಿತ್ರಗಳ, ತಾನೋರ್ವ ಯಶಸ್ವಿ ನಟಿಯೆಂಬುದನ್ನು ಸಾಬೀತುಪಡಿಸಿದ್ದಾಳೆ.
Next Story