varthabharthi

ನಿಧನ

ಪೀಟರ್‍ಲೋಬೊ

ವಾರ್ತಾ ಭಾರತಿ : 2 Dec, 2017

ಬಣಕಲ್, ಡಿ.2: ಬಣಕಲ್‍ನ ಚಕ್ಕಮಕ್ಕಿ ವಾಸಿ ದಿವಂಗತ ಜಾನ್ ಮಾರ್ಟಿನ್ ಲೋಬೊ ಮತ್ತು ತೆರೆಸಾ ಲೋಬೊ ದಂಪತಿಗಳ ಪ್ರಥಮ ಪುತ್ರ ಪೀಟರ್‍ಲೋಬೊ(68) ತೀವ್ರ ಹೃದಯಘಾತದಿಂದ ಚಿಕ್ಕಮಗಳೂರಿನ ವಾಸ್ತವ್ಯದ ಮನೆಯಲ್ಲಿ ನಿಧನರಾದರು.

ಮೃತರು ಮೂಡಿಗೆರೆಯ ಬಿಎಸ್ಸೆಎನ್ನೆಲ್ ಉಪವಿಭಾಗೀಯ ಅಧಿಕಾರಿ ರಾಬರ್ಟ್‍ಲೋಬೊ ಅವರ ಹಿರಿಯ ಸಹೋದರರಾಗಿದ್ದು ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ದಶಕಗಳ ಹಿಂದೆ ಖ್ಯಾತ ಮುಂಬೈ ಟೈಲರ್ ಎಂದು ಪ್ರಸಿಧ್ದಿ ಪಡೆದ ಇವರು ಕೆಲವು ವರ್ಷಗಳ ಹಿಂದೆ ಬಣಕಲ್‍ನಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು.

ಮೃತರು ಪತ್ನಿ,ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.ಅವರ ಅಂತಿಮ ಕ್ರಿಯೆಯು ಡಿ.3ರಂದು ಬೆಳಿಗ್ಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)