varthabharthi

ಸಿನಿಮಾ

ಡಿಸೆಂಬರ್ ನಲ್ಲೇ ಕೊಹ್ಲಿ-ಅನುಷ್ಕಾ ಮದುವೆ?

ವಾರ್ತಾ ಭಾರತಿ : 6 Dec, 2017

ಹೊಸದಿಲ್ಲಿ, ಡಿ.6: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಡಿಸೆಂಬರ್ ನಲ್ಲಿ ಇಟಲಿಯಲ್ಲಿ ವಿವಾಹವಾಗಿಲಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಡಿಸೆಂಬರ್ 9ರಿಂದ 11ರೊಳಗೆ ವಿವಾಹ ನಡೆಯಲಿದ್ದು, ಸದ್ಯದಲ್ಲೇ ಈ ಇಬ್ಬರು ಇಟಲಿಗೆ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. ಟೀ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಸದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಸಣ್ಣ ಬ್ರೇಕ್ ಪಡೆದುಕೊಂಡಿದ್ದಾರೆ.

2013ರಲ್ಲಿ ಟಿವಿ ಜಾಹೀರಾತು ಒಂದರಲ್ಲಿ ನಟಿಸುವ ವೇಳೆ ಕೊಹ್ಲಿ ಹಾಗು ಅನುಷ್ಕಾ ಭೇಟಿಯಾಗಿದ್ದು, ನಂತರ  ಅವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)