varthabharthi

ಸಿನಿಮಾ

AACTA: ಅತ್ಯುತ್ತಮ ಏಷ್ಯನ್ ಚಲನಚಿತ್ರ ಪ್ರಶಸ್ತಿ ಗೆದ್ದ 'ದಂಗಲ್'

ವಾರ್ತಾ ಭಾರತಿ : 6 Dec, 2017

ಮೆಲ್ಬೋರ್ನ್, ಡಿ.6: ಆಮಿರ್ ಖಾನ್ ನಟನೆಯ ದಂಗಲ್’ ಚಿತ್ರ 7ನೆ ‘ಆಸ್ಟ್ರೇಲಿಯನ್ ಅಕಾಡಮಿ ಆಫ್ ಸಿನೆಮಾ ಆ್ಯಂಡ್ ಟೆಲಿವಿಶನ್ ಆರ್ಟ್ಸ್ ಅವಾರ್ಡ್ಸ್’ (AACTA)  ನಲ್ಲಿ ‘ಅತ್ಯುತ್ತಮ ಏಷ್ಯನ್ ಚಲನಚಿತ್ರ’ ಪ್ರಶಸ್ತಿಗೆ ಆಯ್ಕೆಯಾಗಿದೆ.

ಹಾಲಿವುಡ್ ನಟ ರಸೆಲ್ ಕ್ರೋವ್ ನೇತೃತ್ವದ ಜ್ಯೂರಿ ಸದಸ್ಯರ ಪ್ಯಾನೆಲ್ ನಲ್ಲಿ ನಟಿ ಶಬನಾ ಅಝ್ಮಿ ಕೂಡ ಇದ್ದು, ಟ್ವಿಟರ್ ನಲ್ಲಿ ದಂಗಲ್ ತಂಡವನ್ನು ಅಭಿನಂದಿಸಿದ್ದಾರೆ.

“AACTAದಲ್ಲಿ ‘ದಂಗಲ್’ ಅತ್ಯುತ್ತಮ ಏಷ್ಯನ್ ಚಲನಚಿತ್ರ ಪ್ರಶಸ್ತಿ ಗೆದ್ದಿದೆ. ದಂಗಲ್ ಚಿತ್ರತಂಡಕ್ಕೆ ಅಭಿನಂದನೆಗಳು. ರಸೆಲ್ ಕ್ರೋವ್ ಜ್ಯೂರಿಯ ಚೇರ್ಮೆನ್ ಆಗಿದ್ದು, ಇದು ಅವಿರೋಧ ಆಯ್ಕೆಯಾಗಿತ್ತು” ಎಂದು ಶಬನಾ ಅಝ್ಮಿ ಟ್ವೀಟ್ ಮಾಡಿದ್ದಾರೆ.

ಹರ್ಯಾಣದ ಕುಸ್ತಿಪಟು ಮಹಾವೀರ್ ಫೋಗಟ್ ಹಾಗು ಅವರ ಇಬ್ಬರು ಪುತ್ರಿಯರ ಕಥೆಯನ್ನಾಧರಿಸಿದ ಈ ಚಿತ್ರವನ್ನು ನಿತೇಶ್ ಕುಮಾರ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಆಮಿರ್ ಖಾನ್, ಫಾತಿಮಾ ಸನಾ ಹಾಗು ಸಾನ್ಯಾ ಮಲ್ಹೋತ್ರಾ ಮೂಖ್ಯಭೂಮಿಕೆಯಲ್ಲಿ ನಟಿಸಿದ್ದು, ‘ದಂಗಲ್’ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)