ಉತ್ತರಾಖಂಡ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪನ
ರಾಜಧಾನಿ ದಿಲ್ಲಿ, ಗುರ್ಗಾಂವ್ ನಲ್ಲಿ ಕಂಪಿಸಿದ ಭೂಮಿ
ಹೊಸದಿಲ್ಲಿ, ಡಿ.6: ಉತ್ತರಾಖಂಡದಲ್ಲಿ 5.5 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ದಿಲ್ಲಿ ಹಾಗು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಭೂಮಿ ಕಂಪಿಸಿದೆ.
ಹರಿದ್ವಾರ, ಡೆಹ್ರಾಡೂನ್ ಹಾಗು ಉತ್ತರಾಖಂಡದ ಹಲವೆಡೆ 30 ಸೆಕೆಂಡ್ ಗಳಿಗಿಂತಲೂ ಹೆಚ್ಚಿನ ಕಾಲ ಭೂಮಿ ನಡುಗಿದೆ ಎನ್ನಲಾಗಿದೆ. 5.0 ತೀವ್ರತೆಯ ಭೂಕಂಪನ ದೇಶದ ಹಲವೆಡೆ ಸಂಭವಿಸಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿವೆ.
ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. “ದಿಲ್ಲಿಯಲ್ಲಿ ಭೂಕಂಪನ ಸಂಭವಿಸಿದ್ದು ನನ್ನ ಅನುಭವಕ್ಕೆ ಬಂದಿದೆ. ಕೆಲ ನಿಮಿಷಗಳ ಕಾಲ ಭೂಮಿ ನಡುಗಿದೆ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.
Next Story