varthabharthi

ಬೆಂಗಳೂರು

ಯುವತಿಯೊಂದಿಗೆ ಅಸಭ್ಯ ವರ್ತನೆ: ಚಾಲಕನ ಅಮಾನತುಗೊಳಿಸಿದ ಓಲಾ

ವಾರ್ತಾ ಭಾರತಿ : 6 Dec, 2017

ಬೆಂಗಳೂರು, ಡಿ.6: ರಸ್ತೆಯಲ್ಲಿ ಕಾರು ನಿಲ್ಲಿಸಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಚಾಲಕನನ್ನು ಓಲಾ ಕಂಪನಿ ಅಮಾನತು ಮಾಡಿದೆ ಎಂದು ತಿಳಿದುಬಂದಿದೆ.

ಚಾಲಕ ರಾಜಶೇಖರ್ ರೆಡ್ಡಿ ಎಂಬಾತನನ್ನು ಕಂಪೆನಿಯೂ ಅಮಾನತು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಇಂದಿರಾನಗರದಿಂದ ಬಿಟಿಎಂ ಲೇಔಟ್ ತೆರಳುತ್ತಿದ್ದಾಗ ರಾಜಶೇಖರ್ ರೆಡ್ಡಿ ಕಾರನ್ನು ಚೈಲ್ಡ್ ಲಾಕ್ ಮಾಡಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ಕುರಿತು ಓಲಾ ಸಂಸ್ಥೆಗೆ ಯುವತಿ ದೂರು ನೀಡಿದ್ದರು. ಆದರೆ, ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.

ಈ ವಿಚಾರ ಬೆಳಕಿಗೆ ಬಂದ ಬಳಿಕ ಓಲಾ ಕಂಪೆನಿ ಚಾಲಕನನ್ನು ಅಮಾನತು ಗೊಳಿಸಿದ್ದು, ರಾಜಶೇಖರ್ ರೆಡ್ಡಿ ವಿರುದ್ಧ ಪೊಲೀಸರಿಗೂ ದೂರು ನೀಡುವಂತೆ ಕಂಪೆನಿ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)