varthabharthi

ಬೆಂಗಳೂರು

ಅಥ್ಲೆಟಿಕ್ ಕ್ರೀಡಾಪಟುಗೆ ಲೈಂಗಿಕ ಕಿರುಕುಳ: ಆರೋಪ

ವಾರ್ತಾ ಭಾರತಿ : 6 Dec, 2017

ಬೆಂಗಳೂರು, ಡಿ.6: ಕ್ರೀಡಾ ತರಬೇತುದಾರನೊಬ್ಬ ಅಥ್ಲೆಟಿಕ್ ಕ್ರೀಡಾಪಟು ಆಗಿರುವ 9ನೇ ತರಗತಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಇಲ್ಲಿನ ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಕ್ರೀಡಾ ತರಬೇತುದಾರ ಮಂಜುನಾಥ್ (36) ಎಂಬಾತನ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೂರು ನೀಡಲಾಗಿದ್ದು, ಈ ಸಂಬಂಧ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ನಗರದ ಜಯಪ್ರಕಾಶ್ ನಾರಾಯಣ ಕ್ರೀಡಾಶಾಲೆಯಲ್ಲಿ 9ನೆ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಅಥ್ಲೆಟಿಕ್ ಕ್ರೀಡಾಪಟುಗೆ ಆರೋಪಿ ಮಂಜುನಾಥ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ನ.25 ರಿಂದ ಮೂರು ದಿನಗಳ ಅಂತಾರಾಜ್ಯ ಮಟ್ಟದ ಕ್ರೀಡಾಕೂಟದ ಪ್ರಯುಕ್ತ ವಿದ್ಯಾರ್ಥಿನಿ ಸೇರಿದಂತೆ ಹತ್ತಾರು ಮಂದಿ ಕ್ರೀಡಾಪಟುಗಳನ್ನು ಮಂಜುನಾಥ್ ವಿಶಾಖಪಟ್ಟಣಂಗೆ ಕರೆದೊಯ್ದಿದ್ದರು. ಈ ವೇಳೆ ವಿದ್ಯಾರ್ಥಿನಿಯ ಮೈ, ಕೈ ಮುಟ್ಟಿ ಮಂಜುನಾಥ್ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಪುತ್ರಿಗೆ ಆರೋಪಿ ಮಂಜುನಾಥ್ ದೈಹಿಕ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯ ತಂದೆ ದೂರು ನೀಡಿದ್ದಾರೆ. ಈ ಸಂಬಂಧ ಪೊಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)