varthabharthi

ಅಂತಾರಾಷ್ಟ್ರೀಯ

ಸಯೀದ್ ಶಿಕ್ಷಿಸಲು ಹೆಚ್ಚಿನ ಪುರಾವೆ ಬೇಕು: ಪಾಕ್

ವಾರ್ತಾ ಭಾರತಿ : 6 Dec, 2017

ವಾಶಿಂಗ್ಟನ್, ಡಿ. 6: 2008ರ ಮುಂಬೈ ದಾಳಿ ಪ್ರಕರಣದಲ್ಲಿ ಲಷ್ಕರ್ ಎ ತೊಯ್ಬಾ ಮುಖ್ಯಸ್ಥ ಹಫೀಝ್ ಸಯೀದ್‌ನನ್ನು ಶಿಕ್ಷಿಸಲು ನ್ಯಾಯಾಲಯಗಳಲ್ಲಿ ನಿಲ್ಲಬಲ್ಲ ಪುರಾವೆಗಳು ಪಾಕಿಸ್ತಾನಕ್ಕೆ ಬೇಕು ಎಂದು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಐಝಾಝ್ ಅಹ್ಮದ್ ಚೌಧರಿ ಮಂಗಳವಾರ ಹೇಳಿದ್ದಾರೆ.

ಭಾರತ ಪ್ರಬಲ ಪುರಾವೆಗಳನ್ನು ನೀಡುತ್ತಿಲ್ಲವಾದುದರಿಂದ ಪ್ರತಿ ಬಾರಿ ಸಯೀದ್‌ನನ್ನು ಬಂಧಿಸಿದಾಗಲೂ ನ್ಯಾಯಾಲಯಗಳು ಆತನನ್ನು ಬಿಡುಗಡೆ ಮಾಡುತ್ತಿವೆ ಎಂದು ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಅಭಿಪ್ರಾಯಪಟ್ಟರು.

ಈ ವರ್ಷದ ಆರಂಭದಿಂದ ಗೃಹ ಬಂಧನದಲ್ಲಿದ್ದ ಸಯೀದ್‌ನನ್ನು ಕಳೆದ ತಿಂಗಳು ಪಾಕಿಸ್ತಾನದ ನ್ಯಾಯಾಲಯವೊಂದು ಬಿಡುಗಡೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)