varthabharthi

ಗಲ್ಫ್ ಸುದ್ದಿ

ಕುವೈತ್ : ಕುವೈತ್ ಕೆಸಿಎಫ್ ವತಿಯಿಂದ 'ಮೆಹೆಫಿಲ್ ಎ ಮುಸ್ತಫಾ' ಮಿಲಾದ್ ಸಮಾವೇಶ

ವಾರ್ತಾ ಭಾರತಿ : 6 Dec, 2017

ಕುವೈತ್,ಡಿ.6: ಕುವೈತ್ ಕೆಸಿಎಫ್ ವತಿಯಿಂದ 'ಮೆಹೆಫಿಲ್ ಎ ಮುಸ್ತಫಾ ಮಿಲಾದ್ ಸಮಾವೇಶ' ಪ್ರವಾದಿ ಮುಹಮ್ಮದ್ ನಬಿ (ಸ ಅ)ರ ಜನ್ಮದಿನೋತ್ಸವದ ಪ್ರಯುಕ್ತ ಮಿಲಾದ್ ಕಾರ್ಯಕ್ರಮ ಪ್ರವಾಸಿ ಸುನ್ನಿ ಕಾರ್ಯಕರ್ತರ ಸಂಘಟನೆ ಕೆಸಿಎಫ್ ವತಿಯಿಂದ ಇತ್ತೀಚೆಗೆ ಕುವೈತ್ ನ ಸಲ್ಮಿಯಾ ಸಿಮ್ಸ್ ಹಾಲ್ ನಲ್ಲಿ ನಡೆಯಿತು.

ಶಾಫಿ ಕಾನ ಕಿರಾಅತ್ ಪಠಿಸಿದರು. ಕುವೈತ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಜನಾಬ್| ಯಾಕೂಬ್ ಕಾರ್ಕಳ ಸ್ವಾಗತಿಸಿದರು. ಉಮರುಲ್ ಫಾರೂಕ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.ಸ್ವಾಗತ ಸಮಿತಿಯ ಚೇರ್ಮೇನ್ ಅಬ್ಬಾಸ್ ಬಳೆಂಜ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು.
ಐ ಏನ್ ಸಿ ನಾಯಕರಾದ ಹಬೀಬ್ ಕೋಯ ಕುವೈತ್ ಮುಖ್ಯಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಸಯ್ಯದ್ ಅಬ್ದುಲ್ ರಹ್ಮಾನ್ ಫಯಾಝ್ ತಂಙಳ್ ರವರಿಗೆ ಹಾಗು ನಝೀರ್ ಕಡಂಜೆಯವರಿಗೆ ಕಿಲ್ಲೂರು ತಂಙಳ್ ರವರ ನೇತೃತ್ವದಲ್ಲಿ ಬೀಳ್ಕೊಡುಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)